ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ಇಲ್ಲಿನ ರೋಟರಿ ಶಾಲೆಯ ಎಟೆಂಡರ್ ಆಗಿದ್ದ ದೇವಪ್ಪ ಬಂಗೇರ ( 82ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಸೆ. 30 ರಂದು ನಿಧನ ಹೊಂದಿದರು. ಅವರು ಪತ್ನಿ ರೇವತಿ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಆರಂಭದಲ್ಲಿ ಮುಂಬೈಗೆ ತೆರಳಿ ಕ್ಯಾಂಟಿನ್ ಉದ್ಯೋಗಿಯಾಗಿದ್ದ ದೇವಪ್ಪ ಬಳಿಕ ಊರಿಗೆ ಮರಳಿ ವಾಚ್ ಮನ್ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ರೋಟರಿ ಶಾಲೆಗೆ ಅಟೆಂಡರ್ ಆಗಿ ಸೇರಿದ್ದ ಅವರು ಕಛೇರಿಯ ಬ್ಯಾಂಕಿಂಗ್ ಕೆಲಸ ಕಾರ್ಯ ಸೇರಿದಂತೆ ಶಾಲೆಯ ಮಕ್ಕಳ ಕಾಳಜಿ , ನಿರ್ವಹಣೆಯಿಂದ ದೇವಪ್ಪಣ್ಣನಾಗಿ ಮಕ್ಕಳು ಮತ್ತು ಹೆತ್ತವರ ಪ್ರೀತಿ ಪಾತ್ರರಾಗಿದ್ದರು. ನಿವೃತ್ತಿಯ ಬಳಿಕವೂ ಶಾಲಾ ಆಡಳಿತ ಅವರ ಆಸಕ್ತಿಯನ್ನು ಪ್ರೋತ್ಸಾಹಿಸಿ ಗೌರವ ಉದ್ಯೋಗಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿತ್ತು. ಎಂಭತ್ತರ ಇಳಿ ವಯಸ್ಸಲ್ಲೂ ಸಕ್ರಿಯರಾಗಿದ್ದ ಅವರ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯ ಸಭೆ ಹಾಗೂ ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಸಭೆ ನಡೆಸಿ ಸಂತಾಪ ಸಲ್ಲಿಸಲಾಗಿದೆ
ರೋಟರಿ ಶಾಲೆಯ ದೇವಪ್ಪಣ್ಣ ನಿಧನ
RELATED ARTICLES

