HomeFresh Newsಡಿಕೆಶಿ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್: ನಳಿನ್ ಪ್ರತಿಕ್ರಿಯೆ

ಡಿಕೆಶಿ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್: ನಳಿನ್ ಪ್ರತಿಕ್ರಿಯೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಮಾಣಿಕರು, ಪಾರದರ್ಶಕವಾಗಿ ಇದ್ದಿದ್ದೇ ಆದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಅವರ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು.

‘ಅವರಿಗೆ ಭಯ ಯಾಕೆ? ಅವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. ಸಿಬಿಐ ತನಿಖೆಯ ವೇಳೆ ಸರ್ಕಾರ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ’ ಎಂದರು. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದೊಂದೇ ಪ್ರಕರಣ ಇಲ್ಲ, ಇ.ಡಿ.ಯಲ್ಲೂ ಸಾಕಷ್ಟು ಪ್ರಕರಣಗಳು ಇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments