HomeEntertainmentತುಳುನಾಡಿನ ಚರಿತ್ರೆಯ ದಾಖಲೀಕರಣ ಅಗತ್ಯ - ಡಾ.ತುಕರಾಮ ಪೂಜಾರಿ'ಕೆಲ್ಲ ಪುತ್ತಿಗೆಯ ಕೆಲ್ಲರು' ಪುಸ್ತಕ ಬಿಡುಗಡೆ

ತುಳುನಾಡಿನ ಚರಿತ್ರೆಯ ದಾಖಲೀಕರಣ ಅಗತ್ಯ – ಡಾ.ತುಕರಾಮ ಪೂಜಾರಿ’ಕೆಲ್ಲ ಪುತ್ತಿಗೆಯ ಕೆಲ್ಲರು’ ಪುಸ್ತಕ ಬಿಡುಗಡೆ

ಮಂಗಳೂರು : ತುಳುನಾಡಿನ ಚರಿತ್ರೆಯಲ್ಲಿ ಆಳುಪರ ಆಡಳಿತೆಯ ಕಾಲಘಟ್ಟದಲ್ಲಿ ದಂಡನಾಯಕರಾಗಿ ಮುಂಚೂಣಿಯಲ್ಲಿದ್ದ ಕೆಲ್ಲಪುತ್ತಿಗೆಯ ಕೆಲ್ಲ ವಂಶಸ್ಥರ ಸಾಧನೆಯನ್ನು ದಾಖಲಿಸಿರುವುದು ಅತ್ಯಂತ ಮಹತ್ವದ ಕಾರ್ಯ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹಮೂರ್ತಿ ಅವರು ಬರೆದಿರುವ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಇತಿಹಾಸ ಕೃತಿಯನ್ನು ತುಳು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತುಳು‌ನಾಡು ಅಂದರೆ ಕೇವಲ ಆಚರಣೆ, ಆರಾಧನೆ ಮಾತ್ರವಲ್ಲ,
ತುಳುನಾಡಿನ ಇತಿಹಾಸವನ್ನು ತಿಳಿಯುವ ಹಾಗೂ ತಿಳಿಸುವ ಕೆಲಸ ಮಾಡಿದರೆ ಮಾತ್ರ ತುಳುನಾಡಿನ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ಡಾ.ಪಿ.ಎನ್ . ನರಸಿಂಹಮೂರ್ತಿ ಅವರ ಕೊಡುಗೆ ಅನನ್ಯವಾದುದು ಎಂದು ಹೇಳಿದರು. ಇನ್ನೂ ಬೆಳಕಿಗೆ ಬಾರದ ತುಳು ನಾಡಿನ ಇತಿಹಾಸದ ಅಧ್ಯಯನ ಹಾಗೂ ದಾಖಲೀಕರಣ ನಡೆಯಬೇಕಾಗಿದೆ ಎಂದು ತುಕಾರಾಮ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಕೃತಿಕಾರ ಡಾ.ಪಿ.ಎನ್ ನರಸಿಂಹಮೂರ್ತಿ ಅವರು ಮಾತನಾಡಿ, ನಮ್ಮ ಊರಿನ ಚರಿತ್ರೆಯನ್ನು ಅರಿತುಕೊಳ್ಳುವುದೇ ನಾಡಿಗೆ ಕೊಡುವ ನಿಜವಾದ ಗೌರವ ಎಂದರು. ಕೆಲ್ಲ ಪುತ್ತಿಗೆಯ ಕೆಲ್ಲರು ಕೃತಿ ರಚಿಸಲು 35 ವರ್ಷಗಳ ಕಾಲ ಶಾಸನಗಳ ಅಧ್ಯಯನ ಹಾಗೂ ಕ್ಷೇತ್ರ ಅಧ್ಯಯನ ನಡೆಸಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಂಶೋಧಕಿ ಡಾ.‌ಇಂದಿರಾ ಹೆಗ್ಗಡೆ ಹಾಗೂ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಮತ್ತು ಕೆಲ್ಲ ಪುತ್ತಿಗೆ ಕೃತಿಕಾರ ಡಾ.ಪಿ.ಎನ್.ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಜೆ.ಆರ್ . ಲೋಬೊ ಅವರು ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಲ್ಲ ವಂಶಸ್ಥರ ಪ್ರತಿನಿಧಿ ಕೆ.ಪಿ.ಜಗದೀಶ ಅಧಿಕಾರಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ , ಉಡಲ್ ತುಳು ಪತ್ರಿಕೆಯ ಸಂಪಾದಕಿ ಜಯಂತಿ ಎಸ್. ಬಂಗೇರ ಭಾಗವಹಿಸಿದ್ದರು. ತುಳು ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments