ಹೆಬ್ರಿ ತಾಲೂಕಿನ ಮುನಿಯಾಲ್ ಮುದ್ರಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯಲ್ಲೇ ವಿದ್ಯಾಬ್ಯಾಸ ಮುಂದುವರಿಸಿರುವ ವಿಶೇಷ ಚೇತನ ಮಕ್ಕಳ ಮನೆಗಳಿಗೆ ಕಾರ್ಕಳದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಗೂ ಸತ್ಯವಾನ್ ಸಾವಿತ್ರಿ ಟ್ರಸ್ಟ್ ಅಧ್ಯಕ್ಷೆ ಡಾ. ಮಮತಾ ಹೆಗ್ಡೆ ಅವರು ಭೇಟಿ ನೀಡಿದರು.
ವಿಶೇಷ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಮತಾ ಹೆಗ್ಡೆ ಅವರು ಮಕ್ಕಳ ಪೋಷಕ ರೊಂದಿಗೆ ಸಮಾಲೋಚನೆ ನಡೆಸಿದರು .
ನೆಕ್ರೆಯಲ್ಲಿ ನಡೆದ ನಾಗಮಂಡಲ ಪೂಜೆಯಲ್ಲಿ ಭಾಗವಹಿಸಿದ ಮಮತಾ ಹೆಗ್ಡೆ ಅವರು ಪ್ರಸಾದ ಸ್ವೀಕರಿಸಿದರು. ಅದೇ ರೀತಿಯಲ್ಲಿ ಶಿವಪುರದಲ್ಲಿ ನಡೆದ ಶ್ರೀ ಶಿವ ಶಂಕರ ರಥೋತ್ಸವದಲ್ಲಿ ಭಾಗವಹಿಸಿದರು.
ವಿಶೇಷ ಮಕ್ಕಳ ಪೋಷಕರ ಭೇಟಿ ಮಾಡಿದ ಡಾ.ಮಮತಾ ಹೆಗ್ಡೆ
RELATED ARTICLES
