ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದವರು ಕೇರಳಂ ಮಾಜೀ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಗೆ ದಾಳಿ ಮಾಡಿದರು
ಪಿಎಂಎಲ್ಎ- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪಿಣರಾಯಿ ವಿಜಯನ್ರ ಮನೆ ಮತ್ತು ಸಂಬAಧಿತ ಹತ್ತು ನೆಲೆಗಳ ಮೇಲೆ ಮುಂಜಾನೆ ಇಡಿ- ಜಾರಿ ನಿರ್ದೇಶನಾಲಯದವರು ದಾಳಿ ಮಾಡಿದರು.
ಸಿಎಂಆರ್ಎಲ್- ಕೊಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್ಗಳ ಜೊತೆಗೆ ಪಿಣರಾಯಿ ವಿಜಯನ್ರಿಗೆ ಸಂಬAಧ ಇದೆಯೆಂದೂ, ಆ ಕಂಪೆನಿ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆಪಾದಿಸಲಾಗಿದೆ. ತಿರುವನಂತಪುರAನಲ್ಲಿ ಪಿಣರಾಯಿ ವಿಜಯನ್ ಅವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಆ ಮನೆ ಮತ್ತು ಕಂಪೆನಿಗೆ ಸೇರಿದ ಒಂಬತ್ತು ನೆಲೆಗಳ ಮೇಲೆ ಇಡಿ ದಾಳಿ ನಡೆಯಿತು
ಇಡಿ.ಯ ಅಕ್ರಮ ಹಣ ವರ್ಗಾವಣೆ ಆರೋಪದ ದಾಳಿಗೆ ತಡೆ ನೀಡಬೇಕು ಎಂದು ಸಿಎಂಆರ್ಎಲ್ ಕಂಪೆನಿಯು ಕೇರಳ ಹೈಕೋರ್ಟಿಗೆ ಹೋಗಿತ್ತು. ಉಚ್ಚ ನ್ಯಾಯಾಲಯವು ಹಾಗೆ ಅದೀತೆಂದು ನಿರೀಕ್ಷಿಸಲಾಗದು ಎಂದು ಆ ಅರ್ಜಿಯನ್ನು ವಜಾ ಮಾಡಿದೆ. ಅದರ ಬೆನ್ನಿಗೇ ಈ ದಾಳಿ ನಡೆದಿದೆ. ಪಿಣರಾಯಿ ವಿಜಯನ್ರ ಕುಟುಂಬ ಸಂಬAಧದ ಎಕ್ಸಾಲಾಜಿಕ್ ಸೊಲ್ಯೂಶನ್ ಸಂಸ್ಥೆಗೆ ಸಿಎಂಆರ್ಎಲ್ ಅಕ್ರಮ ಹಣ ವರ್ಗಾವಣೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಪಿಣರಾಯಿ ವಿಜಯನ್ರ ಮಗಳು ವೀಣಾ ತೈಕಾಂಡಿಯಲ್ರಿಗೆ ಸಿಎಂಆರ್ಎಲ್ ಕಂಪೆನಿ ಜೊತೆಗೆ ಸಂಬAಧವಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
