ವಿದ್ಯುತ್ ಗೋಪುರ ಬಿದ್ದು ಸಾಣೂರು ಗ್ರಾಮ ಹೊತ್ತಿ ಉರಿಯುವ ಭೀತಿ
ಕಾರ್ಕಳ: ಸುಮಾರು ಒಂದು ವರ್ಷದಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮೂಲಕ 169 ಹೆದ್ದಾರಿ ಮಂಗಳೂರಿನ ನಂತೂರಿನಿಂದ ಕಾರ್ಕಳ ಬೈಪಾಸ್ ವರೆಗೆ ಬರುವ ಚತುಷ್ಟದ ರಸ್ತೆ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು ಆದರೆ ಸಾಣೂರು ಗ್ರಾಮಸ್ಥರಿಗೆ ಈ ಹೆದ್ದಾರಿ ಕಾಮಗಾರಿಕೆ ಒಂದು ಶಾಪವಾಗಿ ಕಾಡುತ್ತಿದೆ.
ಈ ಹೆದ್ದಾರಿ ಕಾಮಗಾರಿಗೆ ಪರಿಣಾಮವಾಗಿ ಸಾಣೂರುಪೇಟೆಯಲ್ಲಿ ಕೃತಕ ನೆರೆ ಶಾಲೆ ಬಳಿ ಇರುವ ಗುಡ್ಡ ಕುಸಿತ, ಶಾಲಾ ಆವರಣ ಗೋಡೆ ಕುಸಿತ ಬಸ್ ನಿಲ್ದಾಣ ಸ್ಥಳಾಂತರ, ನೂರಾರು ಸಮಸ್ಯೆಗಳು ಉಂಟಾಗಿ ಕೆಲವು ತಿಂಗಳ ಹಿಂದೆ ರಸ್ತೆ ಬದಿಯಲ್ಲಿರುವ ಗುಡ್ಡವನ್ನು ಅಗೆದ ಪರಿಣಾಮ, ಗುಡ್ಡ ಕುಸಿತ ಉಂಟಾಗಿ ಆರು ತಿಂಗಳ ಹಿಂದೆ ಸಾಣೂರು ಗ್ರಾಮದ ಏಕೈಕ ಸುಸಜ್ಜಿತ ಪಶು ವೈದ್ಯಕೀಯ ಆಸ್ಪತ್ರೆ, ಕುಸಿದು ಬಿದ್ದು ದಾರಾಶಾಹಿಯಾಯಿತು. ಈಗ ಇದೆ ಗುಡ್ಡದ ಮೇಲಿರುವ ಪಂಚಾಯಿತಿನ 50,000 ಲೀಟರಿನ ಬೃಹತ್ ನೀರಿನ ಟ್ಯಾಂಕಿಗಳು ಸದ್ಯಕ್ಕೆ ಕುಸಿದು ಬೀಳುವ ಹಂತದಲ್ಲಿದೆ. ಅದಲ್ಲದೆ 220 ಕೆವಿ ಹೈ ಟೆನ್ಶನ್ ನ ವಿದ್ಯುತ್ ಲೈನ್ ನ ಗೋಪುರ ನೆಲಕ್ಕೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಈ ವಿದ್ಯುತ್ ಗೋಪುರ ನೆಲಕ್ಕೆ ಕುಸಿದು ಬಿದ್ದಲ್ಲಿ ಇಡೀ ಸಾಣೂರು ಗ್ರಾಮ ಹೊತ್ತಿ ಉರಿಯುದರಲ್ಲಿ ಯಾವೂದೇ ಸಂಶಯವಿಲ್ಲ. ಆದಷ್ಟು ಬೇಗ ಕುಸಿಯುತ್ತಿರುವ ಗುಡ್ಡಕ್ಕೆ ಸುಮಾರು 300 ಮೀಟರ್ ಭದ್ರವಾದ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ಪೂಜಾರಿ ಮಾಧ್ಯಮದ ಮೂಲಕ ಗುತ್ತಿಗೆದಾರರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಮಾಡಿಕೊಂಡರು.