ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಠಾಣೆ ವ್ಯಾಪ್ತಿ ಪುಲ್ಕೇರಿ ಎಂಬಲ್ಲಿ ನಡೆದಿದೆ.ಮೃತ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಹಲಕ್ಕೀಕೆರೆ ನಿವಾಸಿ ಕತ್ತರಿ ಸಾಣೆ ಇಮ್ತಿಯಾಜ್ ರವರ ಪುತ್ರ ನಿಜಾಮ್ (22)ಎಂದು ಗುರುತಿಸಲಾಗಿದೆ.ಕಾರ್ಕಳ ಸಾಣೂರು ನಿಂದ ತನ್ನ ಕೆಲಸಕ್ಕೆಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ಕಳ
ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರದ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ರುದ್ರಭೂಮಿಯ ಮೇಲ್ಟಾವಣಿಗೆ ಬಿದ್ದಿರುವ ಘಟನೆ ನಡೆದಿದೆ. ಮರ ಉರುಳಿ ಬಿದ್ದ ಪರಿಣಾಮವಾಗಿ ಅಂದಾಜು 50 ಸಾ. ರೂ. ನಷ್ಟ ಸಂಭವಿಸಿದೆ. ರೆಂಜಾಳ ಮತ್ತು ಸಾಣೂರು ಗ್ರಾಮದ ಮೃತದೇಹಗಳನ್ನು ಸುಡುವ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ರಾವ್,
ಕಾರ್ಕಳ: ಸುಮಾರು ಒಂದು ವರ್ಷದಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮೂಲಕ 169 ಹೆದ್ದಾರಿ ಮಂಗಳೂರಿನ ನಂತೂರಿನಿಂದ ಕಾರ್ಕಳ ಬೈಪಾಸ್ ವರೆಗೆ ಬರುವ ಚತುಷ್ಟದ ರಸ್ತೆ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು ಆದರೆ ಸಾಣೂರು ಗ್ರಾಮಸ್ಥರಿಗೆ ಈ ಹೆದ್ದಾರಿ ಕಾಮಗಾರಿಕೆ ಒಂದು ಶಾಪವಾಗಿ ಕಾಡುತ್ತಿದೆ. ಈ ಹೆದ್ದಾರಿ ಕಾಮಗಾರಿಗೆ ಪರಿಣಾಮವಾಗಿ ಸಾಣೂರುಪೇಟೆಯಲ್ಲಿ ಕೃತಕ ನೆರೆ ಶಾಲೆ ಬಳಿ ಇರುವ ಗುಡ್ಡ ಕುಸಿತ, ಶಾಲಾ ಆವರಣ ಗೋಡೆ ಕುಸಿತ ಬಸ್ ನಿಲ್ದಾಣ ಸ್ಥಳಾಂತರ, ನೂರಾರು
ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಸಾಣೂರುನಲ್ಲಿ ಬಸ್ಸು ನಿಲ್ದಾಣಕ್ಕೆ ಜಾಗ ಕಾದಿರಿಸದೆ ಇರುವುದರಿಂದ ಪ್ರಯಾಣಿಕರು ರಸ್ತೆಯಲ್ಲಿ ಬಿಸಿಲು ಮಳೆಗೆ ಮೈಯೊಡ್ಡಿ ನಿಲ್ಲುವ ಕಠಿಣ ಪರಿಸ್ಥಿತಿ ಉಂಟಾಗಿದೆ. ಸಾಣೂರು ಗ್ರಾಮದ ಪುಲ್ಕರಿ ಬೈಪಾಸನಿಂದ ಮರತಂಗಡಿ ಸಾಣೂರು ಪದವಿಪೂರ್ವ ಕಾಲೇಜಿನವರೆಗೆ ಸಾಣೂರು ಸೇತುವೆ ಬಳಿ ಸುಮಾರು 500 ಮೀಟರ್ ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿ 4 ಬೃಹತ್ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಹಳೆ ಬಸ್ಸು
ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ನಡೆದಿದೆ. ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು, ಎಂದಿನಂತೆ ಇಂದೂ ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭ ಅನಿರೀಕ್ಷಿತವಾಗಿ ಸ್ಫೋಟಗೊಂಡು ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರು ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಸುಡುಮದ್ದು
ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲೇ ಗೆಲುವಿನ ಸೋಪಾನ ಕ್ರೀಡಾ ಕ್ಷೇತ್ರವು ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ ಕ್ರೀಡೆಯಿಂದ ಶಿಸ್ತು ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಲು ಕ್ರೀಡೆಯಿಂದ ಸಾಧ್ಯ ಎಂದು ಮುಲ್ಲಡ್ಕ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಿಲ್ಟನ್ ಡಿಸೋಜಾ ಹೇಳಿದರು. ಅವರು ಮುಂಡ್ಕೂರು ಭಾರ್ಗವ ವೇದಿಕೆಯ ಮುಂಭಾಗದಲ್ಲಿ ಶ್ರೀ
ಅಚ್ಚ ತುಳು ನೆಲ ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ. ಪ್ರತಿ 12 ವರ್ಷಕ್ಕೊಮ್ಮೆ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆದಿಯಲ್ಲಿ ಕ್ರಮವಾಗಿ ಮೂರು ಮಹಾ ಮಸ್ತಕಾಭಿಷೇಕ ನಡೆದು ಮಧ್ಯೆ ನಾನಾ ಕಾರಣಕ್ಕೆ ನಿಂತು ಹೋಗಿ ತೀರಾ ಕೊನೆಗೆ ಆರಂಭವಾದುದು ವೇಣೂರು ಮಹಾಮಸ್ತಕಾಭಿಷೇಕ. 2000 ಮತ್ತು 2012ನೇ ಇಸವಿಯಲ್ಲಿ ನಡೆದಿತ್ತು. ಇದು ವೇಣೂರಿನ ಈ ಕಾಲದ ಮೂರನೆಯ ಮಹಾಮಸ್ತಕಾಭಿಷೇಕ. ತುಳುನಾಡಿನ ಜೈನ ಭೂಮಿಕೆಯ ಮುಖ್ಯ ಕೊಂಡಿಗಳಾದ ಬೆದ್ರ ಅಥವಾ ಮೂಡಬಿದಿರೆ, ಕಾರ್ಲ
ಕಾರ್ಕಳ ತಾಲೂಕಿನ ಬೈಲೂರು ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಅಧ್ಯಕ್ಷರಾದ ಸುರೇಂದ್ರ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ತುಳು ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರ್,ಮಹಾಮಂಡಲದ ಕೋಶಾಧಿಕಾರಿ ಗಣೇಶ್ ಪೂಜಾರಿ,ಸತೀಶ್ ಪೂಜಾರಿ ಹಾಗೂ ಬೈಲೂರಿನ ಸಮಾಜ ಬಂದವರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಮಾರ್ಚ್ 10ರಂದು ಮುಲ್ಕಿಯಲ್ಲಿ
ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಇಂದಿರಾ ನಗರ ಬಜ್ಪೆ ಅತ್ರಾಡಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆ ಸಾಗುತ್ತಿದ್ದ KA 1969 ನಂಬರ್ ನ ಬೈಕ್ ನಲ್ಲಿ ಅಶ್ವಿನ್ ಎಂಬವರು ಆದೇಶ್ ಎಂಬವರನ್ನು ಸಹಸವಾರನಾಗಿ ಕುಳ್ಳರಿಸಿಕೊಂಡು ಹೋಗುತ್ತಿದ್ದಾಗ ಬೆಳ್ಮಣ್ ಕಡೆಯಿಂದ ಮುಂಡ್ಕೂರು ಕಡೆ ಸಾಗುತ್ತಿದ್ದ ಕೆ ಎ 20 ಡಿ 56 66 ನಂಬರಿನ ಲಾರಿ ಮುಖಾಮುಖಿ
ಕಾರ್ಕಳದ ಅತ್ತೂರು ಬಸಿಲಕದ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಭೇಟಿ ನೀಡಿ ಮೊಂಬತ್ತಿ ಬೆಳಗಿದರು. ಮಂಗಳೂರು ಧರ್ಮ ಪ್ರಾಂತ್ಯದ ಗುರುಗಳಾದ ವಂದನೀಯ ವಾಲ್ಟರ್ ಡಿ ಮೇಲ್ಲೋರವರು ಜನರು ಪ್ರಭೇದನೆಗಳಿಗೆ ಒಳಗಾಗದಂತೆ ಪ್ರಾರ್ಥಿಸೋಣ ಎಂಬ ವಿಷಯದ ಬಗ್ಗೆ ಭಕ್ತಾದಿಗಳಿಗೆ ದೇವರ ವಿಶೇಷ ಸಂದೇಶ ನೀಡಿದರು. ಪ್ರಭೇದನಿಗೆ ಒಳಗಾಗದಂತೆ ಒಂದು ದಿನದ ವಿಷಯವನ್ನು ಧ್ಯಾನಿಸಿ ಅವರು ಗಾಯನ ಬಲಿ ಪೂಜೆ ನೆರವೇರಿಸಿ