HomeFresh Newsಆನೆ ದಾಳಿಯಿಂದ ಹಾನಿ ವಿಚಾರ: ಉಬರಡ್ಕ- ಮಿತ್ತೂರು, ರೆಂಜಾಳ ಗ್ರಾಮದ ಕೃಷಿಕರೊಂದಿಗೆ ಸಂವಾದ

ಆನೆ ದಾಳಿಯಿಂದ ಹಾನಿ ವಿಚಾರ: ಉಬರಡ್ಕ- ಮಿತ್ತೂರು, ರೆಂಜಾಳ ಗ್ರಾಮದ ಕೃಷಿಕರೊಂದಿಗೆ ಸಂವಾದ

ಕಾಡುಪ್ರಾಣಿಗಳಿಂದ ವಿಶೇಷವಾಗಿ ಆನೆ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ- ಮಿತ್ತೂರು ಗ್ರಾಮದ ಮತ್ತು ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವು ಉಬರಡ್ಕ C.A ಬ್ಯಾಂಕ್ ಸಭಾಂಗಣ ಮತ್ತು ಮರ್ಕಂಜದ ಸಭೆಯು ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು. ಹಲವಾರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು, ಸರಕಾರದಿಂದ ಸಿಗುವ ಸವಲತ್ತುಗಳು, ಪರಿಹಾರಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಈಗಾಗಲೇ 3ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಈಗ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇಕಡಾ90%ಕ್ಕೆ ಏರಿಸಬೇಕೆಂದು ಮನವಿಸಲ್ಲಿಸಲಾಗಿದೆ ನಮ್ಮ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದರು. ಉಬರಡ್ಕ ಸೊಸೈಟಿಯಿಂದ ಮತ್ತು ರೆಂಜಳದಲ್ಲಿ ಕೃಷಿಕರ ವತಿಯಿಂದ ಮನವಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ವಲಯ ACF ಪ್ರಶಾಂತ ಪೈ,ಅರಣ್ಯ ವಲಯ ಅಧಿಕಾರಿ ಮಂಜುನಾಥ, ಕಂದಾಯ ಅಧಿಕಾರಿ ಅವಿನ್ ರಂಗತ್ ಮಲೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಸೂಂತೊಡು,ಉಪಾಧ್ಯಕ್ಷೆ ಚಿತ್ರ ಕುಮಾರಿ,ಸದಸ್ಯ ಪ್ರಶಾಂತ ಪಾನತ್ತಿಲ,C.a bank ಅಧ್ಯಕ್ಷ ದಾಮೋದರ ಮದುವೆಗದ್ದೆ, ಮರ್ಕಂಜ ಗ್ರಾಮಪಂಚಾಯತ ಅಧ್ಯಕ್ಷೆ ಗೀತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ,C.A bank CEO ಜಯಪ್ರಕಾಶ ಉರುಂಡೆ, ಹಾಗೂ ಕೃಷಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments