ಲೋಕದಲ್ಲಿ ಅತಿ ಹೆಚ್ಚು ಸಂಖ್ಯೆಯ ಆಡುಗಳು ಇರುವ ದೇಶ ಭಾರತ; ಅತಿ ಹೆಚ್ಚು ಆಡಿನ ಮಾಂಸ ಉತ್ಪಾದಿಸುವ ದೇಶ ಚೀನಾ.
ಚೀನಾದ ತಳಿಗಳು ಹೆಚ್ಚು ಮಾಂಸಲ ಎಂದು ಇದರಿಂದ ತಿಳಿಯಬಹುದು. ಜಗತ್ತಿನಲ್ಲಿ ಒಟ್ಟು 110 ಕೋಟಿ ಮೀರಿ ಆಡುಗಳು ಇವೆ; ಅವುಗಳಲ್ಲಿ ಹದಿಮೂರು ಶೇಕಡಾ ಆಡುಗಳು ಭಾರತದಲ್ಲಿ ಇವೆ.
ಭಾರತದಲ್ಲಿ ಮೊದಲು ಆಡು ಸಾಕಿದ ಪ್ರದೇಶ ಸಿಂಧೂ ನಾಗರಿಕತೆಯ ವಲಯವಾಗಿದೆ. ದೇಶ ಮತ್ತು ಆಡುಗಳ ಸಂಖ್ಯೆ ಮುಂದಿನಂತಿವೆ.
ಭಾರತ 15.4 ಕೋಟಿ, ಚೀನಾ 12.9 ಕೋಟಿ, ನೈಜೀರಿಯಾ 8.93 ಕೋಟಿ, ಪಾಕಿಸ್ತಾನ 8.47 ಕೋಟಿ, ಇತಿಯೋಪಿಯಾ 5.36 ಕೋಟಿ, ಚಾದ್ 4.93 ಕೋಟಿ, ಕೆನ್ಯಾ 3.5 ಕೋಟಿ, ಮಾಲಿ 3.22 ಕೋಟಿ, ಸುಡಾನ್ 3.14 ಕೋಟಿ, ತಾಂಜಾನಿಯಾ 2.76 ಕೋಟಿ.
ಹೆಚ್ಚು ಆಡಿನ ಮಾಂಸ ಉತ್ಪಾದಿಸುವ ದೇಶವಾಗಿದೆ. ಚೀನಾ. ಚೀನಾದಲ್ಲಿ ಪ್ರತಿ ವರುಷ 25 ಕೋಟಿ ಟನ್ ಆಡಿನ ಮಾಂಸ ಉತ್ಪಾದನೆ ಆಗುತ್ತದೆ. ಆಡು ಮಾಂಸ ಉತ್ಪಾದನೆಯಲ್ಲಿ ಭಾರತ, ಪಾಕಿಸ್ತಾನಗಳು ಎರಡು, ಮೂರನೆಯ ಸ್ಥಾನಗಳಲ್ಲಿ ಇವೆ.

