HomeFresh Newsಮೂವರಲ್ಲಿ ಒಬ್ಬರು ನಕಲಿ ವಕೀಲರು; ಭಾರತದ ಆಘಾತಕಾರಿ ಅಂಕಿ ಅಂಶ

ಮೂವರಲ್ಲಿ ಒಬ್ಬರು ನಕಲಿ ವಕೀಲರು; ಭಾರತದ ಆಘಾತಕಾರಿ ಅಂಕಿ ಅಂಶ

ಭಾರತದಲ್ಲಿ ಮೂವರಲ್ಲಿ ಒಬ್ಬರು ನಕಲಿ ವಕೀಲರಿದ್ದು, ಡಿಜಿಟಲ್ ರಿಜಿಸ್ಟ್ರಿ ಮೂಲಕ ನಕಲಿ ವಕೀಲರನ್ನು ಸೋಸಿ ಹಾಕಲು ತೀರ್ಮಾನಿಸಲಾಗಿದೆ.
ಆಧಾರ್ ಮಾದರಿಯಲ್ಲಿ ವಕೀಲರಿಗೆ ರಾಷ್ಟ್ರೀಯ ಡಿಜಿಟಲ್ ರಿಜಿಸ್ಟ್ರಿ ಆರಂಭಿಸಬೇಕು ಎಂದು ವಕೀಲರ ಸಂಘವು ಮಾಡಿದ ಮನವಿ ಅರ್ಜಿಯನ್ನು ಒಪ್ಪಿದ ಸುಪ್ರೀಂ ಕೋರ್ಟು ವಿಚಾರಣೆಗೆ ದಿನ ಗೊತ್ತು ಮಾಡಿತು. ವಕೀಲ ವೃತ್ತಿಯು ಒಂದು ದಂದೆಯಾಗಿದ್ದು, ಮೂವರಲ್ಲಿ ಒಬ್ಬರು ನಕಲಿ ವಕೀಲರು ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದು ಭಾರತದ ವಕೀಲರ ಸಂಘವು ಆತಂಕ ವ್ಯಕ್ತಪಡಿಸಿತು.

ಭಾರತದ ಕೋರ್ಟುಗಳಲ್ಲಿ ವಕೀಲಿಕೆ ಮಾಡುತ್ತಿರುವ 35ರಿಂದ 49 ಶೇಕಡಾ ವಕೀಲರು ನಕಲಿಗಳು ಎಂದು ಇತ್ತೀಚೆಗೆ ಭಾರತ ವಕೀಳರ ಸಂಘದ ಅಧ್ಯಕ್ಷರು ಹೇಳಿದ್ದರು. ಅದರ ಮೇಲೆ ವಕೀಲರುಗಳಾದ ಪ್ರಶಾಂತ್ ಕುಮಾರ್, ವಿಪಿನ್ ನಾಯರ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಕಾನೂನು ವೃತ್ತಿಯ ಪ್ರಾಮಾಣಿಕತೆ ಅಪಾಯದಲ್ಲಿದೆ; ನಿಜವಾದ ವಕೀಲರಿಗೆ ನ್ಯಾಯ ಬೇಕು ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ವಿ. ಮೋಹನ್ ಅವರ ಪೀಠದೆದುರು ಈ ಅರ್ಜಿ ಬಂದಿದೆ. ಕಾನೂನು ಕಾಲೇಜುಗಳು ಸಹಕರಿಸಿದರೆ ಸ್ಪಷ್ಟ ಡಿಜಿಟಲ್ ರಿಜಿಸ್ಟಿ ಸಾಧ್ಯ ಇಲ್ಲದಿದ್ದರೆ ಮತ್ತೆ ನಕಲಿಗಳು ಬೇರೆ ದಾರಿಯಿಂದಲೂ ಬರಬಹುದು ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments