HomeFresh Newsಗುಂಡಿಬೈಲು ಶ್ರೀ ಶನೈಶ್ವರ ಕ್ಷೇತ್ರ : ಶ್ರೀ ಶನೈಶ್ವರ ದೇವರ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ

ಗುಂಡಿಬೈಲು ಶ್ರೀ ಶನೈಶ್ವರ ಕ್ಷೇತ್ರ : ಶ್ರೀ ಶನೈಶ್ವರ ದೇವರ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಉಡುಪಿಯ ಗುಂಡಿಬೈಲುನಲ್ಲಿರುವ ಶ್ರೀ ಶನೈಶ್ವರ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ ಪ್ರಯುಕ್ತ ಮಾರ್ಚ್ 12, 2023 ರ ಭಾನುವಾರ ಸಂಜೆ, ದಾನಿಗಳಾದ ಸಂದೀಪ್ ಶೆಟ್ಟಿಯವರು ನೀಡಿರುವ ದೇವರ ಮೂರ್ತಿಯನ್ನು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ದಿವ್ಯ ಮೆರವಣಿಗೆಯ ಮೂಲಕ ಸಕಲ ವಾದ್ಯ ಘೋಷದೊಂದಿಗೆ ಗುಂಡಿಬೈಲುವಿನ ಶ್ರೀ ಶನೈಶ್ವರ ಕ್ಷೇತ್ರಕ್ಕೆ ತರಲಾಯಿತು.

ಮಾರ್ಚ್ 13, 2023 ರ ಸೋಮವಾರ ಬೆಳಿಗ್ಗೆ, ಮೆರವಣಿಗೆಯ ಮೂಲಕ ತರಲಾದ ಶ್ರೀ ಶನೈಶ್ವರ ದೇವರ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು. ಸಹಸ್ರಾರು ಭಕ್ತಾದಿಗಳ ಆಗಮನದೊಂದಿಗೆ ಅನೇಕ ಪೂಜಾ ಕಾರ್ಯಗಳು ಸಾಗುತ್ತಿವೆ. ರಾತ್ರಿ, ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾ ಭಾಗ ಜರುಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments