ಪಡುಬಿದ್ರಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಉಚಿತ ಪ್ರದರ್ಶನ
ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ.
ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.
ಹಿಂದೂ ಸಂಘಟನೆಯ ಜಯಪ್ರಕಾಶ್ ಪ್ರಭು ಮಾತನಾಡಿ, ಸಿನಿಮಾ ಕೇವಲ ನೆಪ ಮಾತ್ರ, ಸಮಾಜದಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ, ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ನಮ್ಮ ಧರ್ಮ ಅಧಾರಿತ ಸಂಸ್ಕಾರವನ್ನು ತಿಳಿ ಹೇಳುವ ಮಹತ್ತರವಾದ ಜವಾಬ್ದಾರಿ ಹೆತ್ತವರಾಗಿದೆ ಎಂದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ರಾಜೇಶ್ ಕೋಟ್ಯಾನ್, ಅಜಿತ್ ಶೆಟ್ಟಿ, ಸುಜೀತ್ ಶೆಟ್ಟಿ, ಪ್ರಸಾದ್ ಪೂಜಾರಿ, ರಾಜೇಂದ್ರ ಶೆಣೈ ಮುಂತಾದವರಿದ್ದರು.