HomeFresh Newsನೈಟ್ ಫ್ರಾಂಕ್ಸ್ ವೆಲ್ತ್ ರಿಪೋರ್ಟ್ 2026 | ಯುಎಸ್‌ಎ, ಚೀನಾದಲ್ಲಿ 55 ಶೇಕಡಾ ಸಿರಿವಂತರು |...

ನೈಟ್ ಫ್ರಾಂಕ್ಸ್ ವೆಲ್ತ್ ರಿಪೋರ್ಟ್ 2026 | ಯುಎಸ್‌ಎ, ಚೀನಾದಲ್ಲಿ 55 ಶೇಕಡಾ ಸಿರಿವಂತರು | ಭಾರತ ಹಾರಿದರೂ ಜನಸಂಖ್ಯೆ ಪ್ರಕಾರ ಕಡಿಮೆ

2026ರ ನೈಟ್ ಫ್ರಾಂಕ್ ವೆಲ್ತ್ ವರದಿ ಹೊರಬಂದಿದ್ದು, ಅತಿ ಸಿರಿವಂತರ ಸಂಖ್ಯೆಯಲ್ಲಿ ಯುಎಸ್‌ಎಯು ಮುಂಚೂಣಿಯ ಸ್ಥಾನ ಬಿಟ್ಟುಕೊಟ್ಟಿಲ್ಲ. ಎಲ್ಲ ಬಗೆಯಲ್ಲೂ ಚೀನಾ ಈಗ ಯುಎಸ್‌ಎಗೆ ಎದುರಾಳಿ. ಲೋಕದ ಅತಿ ಸಿರಿವಂತರಲ್ಲಿ 55 ಶೇಕಡಾ ಮಂದಿ ಯುಎಸ್‌ಎ, ಚೀನಾ ಎರಡು ದೇಶಗಳಲ್ಲೇ ಇದ್ದಾರೆ. ಪೋಲೆಂಡ್‌ನಲ್ಲಿ ಅತಿ ಸಿರಿವಂತರ ಸಂಖ್ಯೆ 2021ರಿಂದ ಅತಿ ಹೆಚ್ಚು 109 ಶೇಕಡಾ ಹೆಚ್ಚಾಗಿದೆ.

ಭಾರತ ಕೂಡ ಸಿರಿವಂತರ ಲೆಕ್ಕದಲ್ಲಿ ಮೇಲೇರಿದೆ. ಜನಸಂಖ್ಯೆಯಂತೆ ಇದು ಕಡಿಮೆ, ಹಾಗೂ ಸಂಪತ್ತಿನ ತಾರತಮ್ಯ ಭಾರತದಲ್ಲಿ ಅಧಿಕವಿದೆ ಎನ್ನಲಾಗಿದೆ. ಹನ್ನೊಂದು ದೇಶಗಳಲ್ಲಿ ಮಾತ್ರ 10,000ಕ್ಕಿಂತ ಹೆಚ್ಚು ಅತಿ ಸಿರಿವಂತರ ಸಂಖ್ಯೆ ಇದೆ. ಯುಎಸ್‌ಎ 2,51,352, ಚೀನಾ 1,21,677, ಜರ್ಮನಿ 38,215, ಬ್ರಿಟನ್ 27,876, ಫ್ರಾನ್ಸ್ 21,518, ಭಾರತ 19,877, ಜಪಾನ್ 18,914, ಸ್ವಿಜರ್ಲ್ಯಾಂಡ್ 17,672, ಆಸ್ಟ್ರೇಲಿಯಾ 17,466, ಇಟೆಲಿ 15,433, ಕೆನಡಾ 12,920.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments