ಮೂಡುಬಿದಿರೆ : ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯವರು ರಸ್ತೆ ಕಾಮಗಾರಿಯ ಸಂದಭ೯ದಲ್ಲಿ ನೀರಿನ ಸಂಪಕ೯ದ ಪೈಪ್ ಗಳನ್ನು ಅಗೆದು ಹಾಕಿದ್ದು ಇದರಿಂದಾಗಿ ಗ್ರಾಮಸ್ಥರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಪುತ್ತಿಗೆ ಗುಂಡ್ಯಡ್ಕ- ಕಲ್ಲಮುಂಡ್ಕೂರಿಗೆ ಸಂಪಕ೯ ಕಲ್ಪಿಸುವ ರಸ್ತೆಯ ಶ್ರೀನಿವಾಸ ಪುರದ ಬಳಿ ಪಿಡಬ್ಲ್ಯೂಡಿ ಇಲಾಖೆಯವರು ಡಾಮರೀಕರಣ ಮಾಡುವ ಸಂದಭ೯ದಲ್ಲಿ ರಸ್ತೆಯನ್ನು ಅಗೆದು ಪಂಚಾಯತ್ ನಿಂದ ಮನೆಮನೆಗೆ ನೀಡುವ ನೀರಿನ ಸಂಪಕ೯ದ ಪೈಪ್ ಗಳಿಗೆ ಹಾನಿಗಳಾಗಿದ್ದು ಇದರಿಂದ ನೀರಿನ ಸಂಪಕ೯ಕ್ಕೆ ತೊಂದರೆಯುಂಟಾಗುತ್ತಿದೆ.
ಈ ಸಮಸ್ಯೆಯ ಬಗ್ಗೆ ಸಮಾಜ ಸೇವಕ ವಾಸುದೇವ ನಾಯಕ್ ಅವರು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ನೀರಿನ ಪೈಪ್ ಗಳನ್ನು ಮೇಲಕ್ಕೆ ತೆಗೆದು ಹಾಕಲಾಗಿದೆ ಇದರಿಂದಾಗಿ ವೋಹನಗಳು ಅದರ ಮೇಲೆ ಸಂಚರಿಸುವಾರ ಪೈಪ್ ಗಳು ಒಡೆದು ಹೋಗುವ ಸಾಧ್ಯತೆಯಿದ್ದು ಜನರಿಗೆ ಮತ್ತೆ ನೀರಿನ ಸಮಸ್ಯೆ ಕಾಡಲಿದೆ.

