HomeFresh Newsಇಸ್ರೇಲ್-ಅಮೆರಿಕ-ಇರಾನ್ ಸಂಘರ್ಷ: ಇರಾನ್ ನಾಯಕ ಖಮೇನಿ ಹತ್ಯೆ

ಇಸ್ರೇಲ್-ಅಮೆರಿಕ-ಇರಾನ್ ಸಂಘರ್ಷ: ಇರಾನ್ ನಾಯಕ ಖಮೇನಿ ಹತ್ಯೆ

ಟೆಹರಾನ್: 1989ರಿಂದ ಇರಾನ್‌ನ ಪರಮೋಚ್ಚ ನಾಯಕನಾಗಿದ್ದ,ಅಯತೊಲ್ಲಾ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ.

86 ವರ್ಷದ ಧರ್ಮಗುರು ಖಮೇನಿ ಅವರ ಸಾವನ್ನು ಇರಾನ್ ಸರ್ಕಾರಿ ದೂರದರ್ಶನ ಭಾನುವಾರ ಮುಂಜಾನೆ ಖಚಿತಪಡಿಸಿದೆ.

ಇದಕ್ಕೂ ಕೆಲವು ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಹತ್ಯೆ ಮಾಡಲಾಗಿದೆ ಎಂದು ಘೋಷಿಸಿದ್ದರು.

ಖಮೇನಿ ಅವರ ಉನ್ನತ ಸಲಹೆಗಾರ ಅಲಿ ಶಮ್ಖಾನಿ ಮತ್ತು ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಕ್ಪೂರ್ ಕೂಡ ಹತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಖಮೇನಿ ಮಗಳು, ಅಳಿಯ ಮತ್ತು ಮೊಮ್ಮಗಳು ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.ಈ ದಾಳಿಗೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಅಬುಧಾಬಿಯಲ್ಲಿ ಕನಿಷ್ಠ ಇಬ್ಬರು ಮತ್ತು ಟೆಲ್ ಅವಿವ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments