ಜಲೀಲ್ ಹತ್ಯೆ ಖಂಡಿಸಿ ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮನವಿ : ನಾಳೆ ಧರಣಿ

ಕರಾವಳಿ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಕೃಷ್ಣಾಪುರದ ಜಲೀಲ್ ಎಂಬ ಅಮಾಯಕನನ್ನು ಹತ್ಯೆ ಮಾಡಿದ ಆರೋಪಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡರು ಮನವಿ ಸಲ್ಲಿಸಿದರು.
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳನ್ನ ಮಟ್ಟ ಹಾಕಬೇಕು. ಜೊತೆಗೆ ಕೃಷ್ಣಾಪುರದ ಜಲೀಲ್ ಎಂಬ ಅಮಾಯಕನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡರು ಮನವಿ ಸಲ್ಲಿಸಿದರು. ಇನ್ನು ನೈಜ ಆರೋಪಿಗಳನ್ನು ಅಪರಾಧ ಸಂಹಿತೆಯ ಕಠಿಣ ಕಾಲಂನಡಿಯಲ್ಲಿ ಕೇಸು ದಾಖಲಿಸಬೇಕು. ಪೊಲೀಸ್ ಇಲಾಖೆಯ ಮೇಲೆ, ಕಾನೂನು ಸುವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಕುಸಿಯುವಂತೆ ಮಾಡುª ಹತ್ಯಾಸರಣಿಗಳಿಗೆ ಅಂತ್ಯ ಕಾಣುವಂತೆ ಮಾಡಬೇಕು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳದೇ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ಹೇಳಿದ್ರು. ತದ ಬಳಿಕ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂಸುಫಿಯಾನ್ ಇಬ್ರಾಹಿಂ ಅವರು, ಕೃಷ್ಣಾಪುರದ ಜಲೀಲ್ ಹತ್ಯೆ ಜನರಲ್ಲಿ ಆತಂಕ ಮೂಡಿದೆ.ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆದಂತೆ, ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಜಲೀಲ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಈಗಾಗಲೇ ತಾರತ್ಯಮ ಮಾಡಿದ ವಿಚಾರ ಎಲ್ಲಾರ ಮನಸ್ಸಿನಲ್ಲಿದೆ. ಹಾಗಾಗಿ ಸರ್ಕಾರ ದೊಡ್ಡ ಮೊತ್ತ ಪರಿಹಾರ ನೀಡಬೇಕು. ಇನ್ನು ಘಟನೆಯನ್ನು ಮುಂದಿಟ್ಟುಕೊಂಡು ಅಶಾಂತಿಯನ್ನು ಸೃಷ್ಟಿಸಬಾರೆಂದು ಅವರು ಹೇಳಿದರು. ನಾಳೆ 3 ಗಂಟೆಗೆ ನಗರದ ಮಿನಿವಿಧಾನಸೌಧ ಮುಂಭಾಗಲ್ಲಿ ವಿವಿಧ ಸಂಘಟನೆ ನೇತೃತ್ವದಲ್ಲಿ ಹತ್ಯೆಯನ್ನು ಖಂಡಿಸಿ, ಹಕ್ಕೋತ್ತಾಯ ಚಳುವಳಿಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಧರ್ಮಗಳ ನಡುವೆ ಸಂಘರ್ಘ ನಡೆಯುತ್ತಿಲ್ಲ, ಧರ್ಮದ ಬಣ್ಣವನ್ನು ಹಚ್ಚಿಕೊಂಡು, ಅಧಿಕಾರಕ್ಕಾಗಿ ಇಂತಹ ಕೃತ್ಯಗಳು ನಡೆಯುತ್ತಿದೆ. ಚುನಾವಣೆ ಹತ್ತಿರ ಬರುವಾಗ, ಧರ್ಮ- ಧರ್ಮಗಳ ನಡುವೆ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ವೇಳೆ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಡಾ| ಮುಹಮ್ಮದ್ ಫಾಝಿಲ್ ರಝ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಇಕ್ಬಾಲ್.ಬಿ,
ಸದಸ್ಯರಾದ ಮುಹಮ್ಮದ್ ಹನೀಫ್ ಬಜ್ಪೆ , ರಾಜ್ಯ ಸಮಿತಿ ಸದಸ್ಯರಾದ ಆಶ್ರಫ್ ಕಿನಾರೆ, ಮೊದಲಾದವರು ಉಪಸ್ಥಿತರಿದ್ದರು.
