HomeFresh Newsಮಂಗಳೂರು: ಜ.15ರಂದು ಕದ್ರಿಯಲ್ಲಿ ವಿಶ್ವಪ್ರಸನ್ನ ತೀರ್ಥರಿಗೆ ಸಾರ್ವಜನಿಕ ಗುರುವಂದನೆ

ಮಂಗಳೂರು: ಜ.15ರಂದು ಕದ್ರಿಯಲ್ಲಿ ವಿಶ್ವಪ್ರಸನ್ನ ತೀರ್ಥರಿಗೆ ಸಾರ್ವಜನಿಕ ಗುರುವಂದನೆ

ಮಂಗಳೂರು: “ವಿಶ್ವ ಹಿಂದೂ ಪರಿಷತ್ ವತಿಯಿಂದ ಜ.15ರಂದು ಸಂಜೆ 7 ಗಂಟೆಗೆ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸಾರ್ವಜನಿಕ ಗುರುವಂದನೆ ಕಾರ್ಯಕ್ರಮ ಜರುಗಲಿದೆ” ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್ ಕೆ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದಿನ ಕಾರ್ಯಕ್ರಮದಲ್ಲಿ ಕದಳಿ ಶ್ರೀ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ವಿಠಲದಾಸ ತಂತ್ರಿಯವರು ವಹಿಸಲಿದ್ದು, ಡಾ.ಎ.ಜೆ. ಶೆಟ್ಟಿಯವರು ಶುಭ ಸಂದೇಶ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಕಾರ್ಯದರ್ಶಿ ಸುಧಾಕರ್ ಪೇಜಾವರ, ಅಧ್ಯಕ್ಷ ಹೆಚ್.ಕೆ. ಪುರುಷೋತ್ತಮ್, ಗೋಪಾಲ ಕುತ್ತಾರ್, ಗಿರಿಪ್ರಕಾಶ್ ತಂತ್ರಿ, ಶಿವಾನಂದ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments