HomeFresh Newsಕಡಬ: ಪಹಲ್‌ಗಾಂವ್ ದಾಳಿಗೆ ಖಂಡನೆ: ಹೆದ್ದಾರಿ ತಡೆ ನಡೆಸಿ ಹಿಂದೂ ಹಿತರಕ್ಷಣಾ ವೇದಿಕೆ...

ಕಡಬ: ಪಹಲ್‌ಗಾಂವ್ ದಾಳಿಗೆ ಖಂಡನೆ: ಹೆದ್ದಾರಿ ತಡೆ ನಡೆಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ಕಡಬ: ಜಮ್ಮು ಕಾಶ್ಮೀರದ ಪಹಲ್‌ಗಾಂವ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಕಡಬದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಹೆದ್ದಾರಿ ತಡೆಸಿ ಪ್ರತಿಭಟನೆ ನಡೆಸಲಾಯಿತು.
ವಿಶ್ವ ಹಿಂದೂ ಪುತ್ತೂರು ಜಿಲ್ಲಾ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕಾಶ್ಮಿರದ ಪಹಲ್ ಗಾಂವ್ ನಲ್ಲಿ ಉಗ್ರರು ಪ್ರವಾಸಿಗಳ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಇದನ್ನು ಸಹಿಸಲೂ ಸಾದ್ಯವಿಲ್ಲ. ಯಾರೆಲ್ಲ ಈ ಕೃತ್ಯದಲ್ಲಿ ತೊಡಗಿದವರು ಹಾಗೂ ಇದರಲ್ಲಿ ಇವರನ್ನು ಬೆಂಬಲಿಸಿದವರನ್ನು ಬಂಧಿಸಿ ಅವರ ತಡೆ ಕಡಿಯಬೇಕು. ಹಾಗೂ ಪಾಕಿಸ್ಥಾನಕ್ಕೆ ಗಡಿಪಾರು ಮಾಡಬೇಕು. ನಾವು ಇoತಹದನ್ನು ಸಹಿಸಿದರೆ, ನಾಳೆ ನಮ್ಮ ಮನೆ ಬಾಗಿಲಿಗೆ ಇಂತಹ ಘಟನೆ ಬರಬಹುದು. ಭಯೋತ್ಪಾದಕ ಧರ್ಮ ಯಾವುದೆಂದು ಗುರುತಿಸಿ ಹತ್ಯೆ ನಡೆಸಿದ್ದಾರೆ ಎಂದಾದರೆ ಭೀಕರ ಎನಿಸುತ್ತದೆ. ಯಾವುದೇ ಹಿಂದುವಿಗೆ ಅನ್ಯಾಯ ಮಾಡುವುದಾದರೆ ಅದನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದರು.


ನಿವೃತ್ತ ಅರಣ್ಯ ಎ ಸಿ ಎಫ್ ಸದಾಶಿವ ಭಟ್ ಮಾತನಾಡಿ, ನಾವೆಲ್ಲ ಭಾರತ ಮಾತೆಯ ಮಕ್ಕಳಾಗಿ ಉಗ್ರ ದಾಳಿಯನ್ನು ಖಂಡಿಸಬೇಕು. ನಾವೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಎಂದರು

ಉಗ್ರರ ದಾಳಿ ಖಂಡಿಸಿ ಕಡಬ ಪೇಟೆಯಲ್ಲಿ ಬಹುತೇಕ ವರ್ತಕರು ಸ್ವಯಂ ಪ್ರೇರಿತ ಅಂಗಡಿಗಳನ್ನು ಬಂದ್ ಮಾಡಿ, ಪ್ರತಿಭಟನೆಯಲ್ಲಿ‌ ಭಾಗವಹಿಸಿದ್ದರು. ಸುಮಾರು ಅರ್ಧ ತಾಸು ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ಕಡಬ ಪೊಲೀಸರು ಬಂದೋ ಬಸ್ತ್ ಮಾಡಿದ್ದರು.
ಕಾರ್ಯಕ್ರಮ ದಲ್ಲಿ ಸೋಮಪ್ಪ ನಾಯ್ಕ, ಪ್ರಕಾಶ್ ಎನ್.ಕೆ., ರಾಧಾಕೃಷ್ಣ ಕೋಲ್ಪೆ, ಉಮೇಶ್ ಜಾಕಿ ಬಲ್ಯ, ಪ್ರಶಾಂತ್ ಪಂಜೋಡಿ, ಮೇದಪ್ಪ ಗೌಡ ಡೆಪ್ಪುಣಿ, ದಯಾನಂದ ಉಂಡಿಲ, ಅಶೋಕ್ ಕುಮಾರ್ ಪಿ., ಪ್ರಮೋದ್ ನಂದಗುರಿ, ಮೋಹನ್ ಕೆರೆಕ್ಕೋಡಿ, ಜಿನಿತ್ ಮರ್ದಾಳ ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಶಿವಪ್ರಸಾದ್ ಮೈಲೇರಿ ಸ್ವಾಗತಿಸಿ, ಕೃಷ್ಣ ಎಂ.ಆರ್. ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments