HomeFresh Newsಕದ್ರಿ : ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ಕದ್ರಿ : ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ಮಂಗಳೂರಿನ ಕದ್ರಿ ಸಮೀಪದ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.

ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಅಲ್ಲಿದ್ದ ಪ್ರಪಾತದ ಸನಿಹದಲ್ಲೇ ಗಿಡ ಗಂಟಿಗಳ ಮಧ್ಯೆ ಸಿಲುಕಿಕೊಂಡಿದೆ. ಕಾರು ಢಿಕ್ಕಿಯಾದ ರಭಸಕ್ಕೆ ದಾರಿ ದೀಪದ ಲೈಟ್ ಕಂಬ ಕಿತ್ತು ಅನತಿ ದೂರಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಮೂವರಿಗೆ ಅಲ್ಪ ಸ್ವಲ್ಪ ಗಾಯಾಗಳಾಗಿದೆ. ಸ್ವಲ್ಪ ತಪ್ಪಿದ್ದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆಗಳಿತ್ತು.
ಸಂಚಾರಿ ಪೆÇಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments