ಕಾರ್ಕಳದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ

ಕಾರ್ಕಳ, ಈ ಸಲದ ಚುನಾವಣೆ ಕೌರವರ ಹಾಗೂ ಪಾಂಡವರ ಯುದ್ಧ, ಸತ್ಯದ ಮತ್ತು ಸುಳ್ಳಿನ ನಡುವಿನ ಯುದ್ಧ ವಾಗಿದೆ. ಈ ಸಲದ ಚುನಾವಣೆಯಲ್ಲಿ ಸತ್ಯಕ್ಕೆ ಜಯ ಸಲ್ಲುವುದು ಗ್ಯಾರಂಟಿಯಾಗಿರುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಖಚಿತ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಳು ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಕಾರ್ಕಳದಲ್ಲಿ ತಮ್ಮ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಎಚ್. ಶೇಖರ ಮಡಿವಾಳ್ ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ನೆಚ್ಚಿನ ಅಭ್ಯರ್ಥಿಯಾದ ಮುನಿಯಲು ಉದಯಕುಮಾರ್ ಶೆಟ್ಟಿ ಅವರಿಗೆ ಅತ್ಯಂತ ಗರಿಷ್ಠ ಮತಗಳಿಂದ ಗೆಲ್ಲಿಸಿ ದಿವಂಗತ ಗೋಪಾಲ ಭಂಡಾರಿ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಬೇಕಾಗಿ ವಿನಂತಿಯನ್ನು ಮಾಡಿಕೊಂಡರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದರಲ್ಲಿ ಸಂಶಯವಿಲ್ಲ ಕಾರ್ಕಳ ಕ್ಷೇತ್ರದ ಜನರು ಈ ಸಲ ಕಾಂಗ್ರೆಸ್ಸನ್ನು ಮರಳಿ ತರುವಲ್ಲಿ ಯಶಸ್ವಿಯಾಗುತ್ತಾರೆ.
ಎಂದು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು. ವೇದಿಕೆಯಲ್ಲಿ ಪ್ರಭಾಕರ ಬಂಗೇರ, ಸುಪ್ರೀತ ಶೆಟ್ಟಿ ಬ್ಲಾಕ್, ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಅಷ್ಪಕ ಅಹಮದ್, ಹಿರಿಯನ್ನ ಶೆಟ್ಟಿ, ಕಾಂತಿ ಶೆಟ್ಟಿ, ಮುಂತಾದವರು ಉಪಸಿತರಿದ್ದು ಶುಭೋದ ರಾವ್ ಕಾರ್ಯಕ್ರಮದ ನಿರೂಪಿಸಿದರು.