ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ-2022

ಕಾರ್ಕಳದ ಮಾಜಿ ಶಾಸಕ ದಿವಂಗತ ಎಚ್. ಗೋಪಾಲ ಭಂಡಾರಿ ಸ್ಮರಣಾರ್ಥ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ-2022ರ ಉದ್ಘಾಟನಾ ಕಾರ್ಯಕ್ರಮವು ಕಾರ್ಕಳದ ಸುಧೀರ್ ಪುರಾಣಿಕ್ ವೇದಿಕೆಯಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ದೀಪ ಬೆಳಗಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಉದ್ಯಮಿ ಸುರೇಂದ್ರ ಶೆಟ್ಟಿ ಮಾತನಾಡಿದ ಅವರು ಮಾಜಿ ಶಾಸಕರಾದ ದಿವಂಗತ ಗೋಪಾಲ ಭಂಡಾರಿ ಅವರು ಬಡವರ ಪಾಲಿಗೆ ದೇವರಾಗಿದ್ದ ಮನುಷ್ಯ ನಮ್ಮಲ್ಲಿ ನಾಯಕತ್ವದ ಗುಣ ಬೆಳೆಸುವಲ್ಲಿ ಭಂಡಾರಿಯವರ ಶ್ರಮ ಬಹಳಷ್ಟಿದೆ ಎಂದರು.

ನ್ಯಾಯವಾದಿ ಶೇಖರ ಮಡಿವಾಳ್, ಪುರಸಭೆ ವಿರೋಧ ಪಕ್ಷದ ನಾಯಕರಾದ ಅಶ್ಪಕ್ ಅಹಮ್ಮದ್, ಶುಭದ ರಾವ್, ಇಕ್ಬಾಲ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಮಾಳಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಹೆಗಡೆ, ಅವಿನಾಶ್ ಶೆಟ್ಟಿ, ಇನ್ನಗ್ರಾಮ ಪಂಚಾಯತ್ ಸದಸ್ಯ, ಕುಶ ಮುಲ್ಯ, ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕರಾದ ಸುರೇಶ್ ಪುರಾಣಿಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.