ಫೆ.2ರಂದು ಕರಾವಳಿಯಲ್ಲಿ ಕ್ಲಾಂತ ಸಿನಿಮಾ ಬಿಡುಗಡೆ

ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಬೇಸ್ಡ್ ಸಿನಿಮಾ `ಕ್ಲಾಂತ ಕರಾವಳಿಯ ಸಿನಿಮಾ ಮಂದಿರದಲ್ಲಿ ಫೆ.2ರಂದು ಬಿಡುಗಡೆ ಕಾಣಲಿದೆ. ಚಿತ್ರದ ಬಹುತೇಕ ಭಾಗ ಕರಾವಳಿಯಲ್ಲಿಯೇ ಚಿತ್ರೀಸಲಾಗಿದೆ ಎಂದು ಚಿತ್ರದ ನಿರ್ದೇಶಕ ವೈಭವ್ ಪ್ರಶಾಂತ್ ಹೇಳಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಮಣ್ಣಿನ ಮಹಿಮೆ, ಆಚಾರ ವಿಚಾರ, ಸಂಸ್ಕೃತಿಯ ಜತೆಯಲ್ಲಿ ಕೊರಗಜ್ಜ ದೈವದ ಪವಾಡ ಸಾರುವ ವಿಚಾರಗಳು ಚಿತ್ರದಲ್ಲಿ ನೀಡಲಾಗಿದೆ. ಜ.19ರಂದು ರಾಜ್ಯದ ನಾನಾ ಭಾಗದಲ್ಲಿ ಸಿನಿಮಾ ಬಿಡುಗಡೆ ಕಂಡು ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದರು. ಈ ಸಂದರ್ಭ ಚಿತ್ರದ ನಟ ಎಂ. ವಿಘ್ನೇಶ್ ಮಾತನಾಡಿದ ಅವರು, ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ. ಕುಟುಂಬ ಸಮೇತರಾಗಿ ಈ ಚಿತ್ರವನ್ನ ನೋಡಬಹುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಟಿ ಪಂಚಮಿ ವಾಮಂಜೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.