ಕೆಎಂಸಿ ಆಸ್ಪತ್ರೆ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಕೆಎಂಸಿ ಆಸ್ಪತ್ರೆ ವತಿಯಿಂದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವು ನಡೆಯಿತು.

ನಗರದ ಟಾಗೋರ್ ಪಾರ್ಕ್ನಲ್ಲಿರುವ ಲೇಡಿಸ್ ಕ್ಲಬ್ನಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಹಿರಿಯ ವೈದ್ಯ ತಜ್ಷರ ತಂಡದೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪರಿಣತರ ವೈದ್ಯರ ಸಮಿತಿಯಲ್ಲಿ ನಿರ್ನಾಳಗ್ರಂಥಿ ಶಾಸ್ತ್ರದ ಸಲಹಾ ತಜ್ಞರಾದ ಡಾ. ಶ್ರೀನಾಥ್ ಪ್ರತಾಪ್ ಶೆಟ್ಟಿ ಅವರು ಮಧುಮೇಹ ಪೂರ್ವ ಸ್ಥಿತಿ ಮತ್ತು ಮಧುಮೇಹ ಉಪಶಮನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ನಂತರ  ಆಂತರಿಕ ವೈದ್ಯಕೀಯ ಸಲಹಾತಜ್ಞ ಮತ್ತು ಮಧುಮೇಹ ತಜ್ಞರಾದ ಡಾ.ಹರೂನ್ ಎಚ್ ಅವರು ಮಧುಮೇಹ ಜಾಗೃತಿ ಕುರಿತು ವಿವರಿಸಿದರು.

ಸಂದರ್ಭದಲ್ಲಿ ಮೂತ್ರಪಿಂಡ ರೋಗಶಾಸ್ತ್ರ ಸಲಹಾ ತಜ್ಞರಾದ ಡಾ. ಮಯೂರ್ ವಸಂತ ಪ್ರಭು, ವಿಟ್ರಿಯೊ ರೆಟಿನಾ ಸಲಹಾ ತಜ್ಞರಾದ ಡಾ. ಗ್ಲಾಡೀಸ್ ರೇಶ್ಮಾ ರೋಡ್ರಿಗಸ್ ಗ್ಲಾಡಿಸ್ರಾಡ್ರಿಗಸ್, ಪಾದರೋಗಶಾಸ್ತ್ರ ಸಲಹಾತಜ್ಞರಾದ ಡಾ. ಪ್ರವೀಣ್ಚಂದ್ರ ನಾಯಕ್, ಹಿರಿಯ ಆಹಾರಕ್ರಮ ತಜ್ಞ ಅರುಣ್ ಮಲ್ಯ ಅವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.