ಮೂಡುಬಿದಿರೆ : ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ನಾಗದೇವರಿಗೆ ಹಾಲಾಭಿಷೇಕ, ಸಿಯಾಳಾಭಿಷೇಕ, ತನು ತಂಬಿಲ ಸಮರ್ಪನೆ ಸಹಿತ ನಾಗರ ಪಂಚಮಿಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕರಾಡ ಬ್ರಾಹ್ಮಣ ಶ್ರೀ ವೇದಮೂರ್ತಿ ಪ್ರಭಾಕರ ಭಟ್ ಮಂಗಳೂರು ರವರ ಪೌರೋಹಿತ್ಯದಲ್ಲಿ ವೈಭವದಿಂದ ಜರಗಿತು.

ಈ ಬಾರಿ ನಾಗದೇವರ ಬಿಂಬಗಳಿಗೆ ಮನೆಯಲ್ಲಿಯೇ ಬೆಳೆದ ಹೂಗಳಿಂದ ಅಲಂಕರಿಸಿ, ಹೊರಗಿನಿಂದ ಬಂದಂತಹ ಹೂ ಗಳನ್ನು ನಾಗಬನದ ಅಲಂಕಾರಕ್ಕೆ ಬಳಸಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಿ ಗಮನ ಸೆಳೆಯಿತು.

