HomeFresh Newsಕುಕ್ಕೆ: 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ

ಕುಕ್ಕೆ: 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ

ಕಡಬ,ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ವಾರ್ಷಿಕ ಆದಾಯ ರೂ.155,95,19,567.08ಗೆ ಏರಿಕೆಯಾಗಿದ್ದು, ಕಳೆದ ವರ್ಷ ಕ್ಷೇತ್ರದ ಆದಾಯ ರೂ.146.01 ಕೋಟಿ ಆಗಿತ್ತು.

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂಧರ್ಮದಾಯ ದತ್ತಿ ಇಲಾಖೆಯಡಿಯಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾಗರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಇದು ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಭೂಮಿ ಸಂಬoಧ ಗುತ್ತಿಗೆಗಳಿಂದ ಬರುವ ವರಮಾನ ರೂ.80,62,320.00 ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನ ರೂ.13,24,299.60, ಕಟ್ಟಡಗಳು/ಅಂಗಡಿಗಳ ಬಾಡಿಗೆಯಿಂದ ರೂ.1,10,26,300.00, ರೂಡಿಗತ ಜಮೆಗಳು ಕಾಣಿಕೆ ರೂ.5,42,20,936.72, ಕಾಣಿಕೆ (ಇ ಹುಂಡಿ) ರೂ.44,18,498.56, ಹುಂಡಿ ಸಂಗ್ರಹಣೆ ರೂ.27,34,38,775.00, ಸೇವಾ ಕಾಣಿಕೆ ರೂ.59,19,74,760.43, ಅನುದಾನ 2,51,701.00, ಹೂಡಿಕೆಗಳಿಂದ ಬಂದ ವರಮಾನಗಳಲ್ಲಿ ಹೂಡಿಕೆಯಿಂದ ಬಂದ ಬಡ್ಡಿ ರೂ.42,47,44,463.00, ಉಳಿತಾಯ ಖಾತೆ ಹಾಗೂ ಇತರೆ ಬಡ್ಡಿ ರೂ.70,42,734.00, ಸಂಕೀರ್ಣ ಜಮೆಗಳು – ಇತರ ಬಾಬ್ತುಗಳು ರೂ.3,07,90,204.52, ಛತ್ರ ಸಂರಕ್ಷಣಾ ವಂತಿಗೆ ರೂ.6,42,31,750.00, ಅನ್ನಸಂತರ್ಪಣೆ ನಿಽ (ಮೀಸಲು ನಿಽ) ರೂ.8,06,76,136.00, ಅಭಿವೃದ್ಧಿ ನಿಽ ರೂ.8,67,438.25, ಶಾಶ್ವತ ಸೇವಾ ಮೂಲಧನ ರೂ.64,49,250.00 ಸೇರಿದಂತೆ ಒಟ್ಟು ಜಮೆ (ಒಟ್ಟು ಆದಾಯ) ರೂ.155,95,19,567.08 ಸಂಗ್ರಹಗೊಂಡಿದೆ.


ಸಿಬ್ಬಂದಿ ವರ್ಗ ರೂ.22,65,12,352.06, ನಿತ್ಯಕಟ್ಲೆ ರೂ.45,12,576.00, ಹೆಚ್ಚುಕಟ್ಲೆ ರೂ.79,93,630.00, ರಥೋತ್ಸವ ರೂ.2,79,13,717.00, ಇತರ ವಿಶೇಷ ಸಂದರ್ಭಗಳು (ದಿಟ್ಟಂ ಪ್ರಕಾರ) ರೂ.9,95,868.00, ಹರಿಕೆ ಸೇವೆಗಳ ಖರ್ಚು ರೂ.22,30,28,298.00, ಭೂಮಿಗಳು ರೂ.2,13,263.00, ಕಟ್ಟಡಗಳು ರೂ.1,59,29,443.00, ತೆರಿಗೆಗಳು ರೂ.46,582.00, ಸಾಧನ ಸರಂಜಾಮು ರೂ.1,43,92,196.00, ಜನಾರೋಗ್ಯ ರೂ.3,20,03,812.00, ಶಿಕ್ಷಣ, ಧಾರ್ಮಿಕ ಮತ್ತು ಧರ್ಮಾದಾಯಗಳು ರೂ.16,56,65,773.00, ವಂತಿಗೆಗಳು – ಸಾಮಾನ್ಯ ಸಂಗ್ರಹಣಾ ನಿ ರೂ.4,93,99,953.00, ಲೆಕ್ಕ ಪರಿಶೋಧನಾ ನಿಽ ರೂ.1,00,00,000.00, ವ್ಯಾಜ್ಯದ ವೆಚ್ಚ ರೂ.7,24,910.00, ದೇವಸ್ಥಾನದ ನೌಕರರಿಗೆ ಸೇವಾಂತ್ಯ ಸೌಲಭ್ಯಗಳು ರೂ.75,53,575.00, ವಿಶೇಷ – ಹೊಸ ಕಟ್ಟಡಗಳ ನಿರ್ಮಾಣ ರೂ.6,68,094.00, ಕಾಮಗಾರಿಗಳ (ಕಟ್ಟಡ ಹೊರತು) ರೂ.1,07,19,155.00 ಸೇರಿದಂತೆ ಒಟ್ಟು ಖರ್ಚು ರೂ.79,82,73,197.06 ಆಗಿದೆ.


2023-24ರಲ್ಲಿ ರೂ.146.01 ಕೋಟಿ, 2022-23ರಲ್ಲಿ ರೂ.123 ಕೋಟಿ, 2021-22ರಲ್ಲಿ ರೂ72.73 ಕೋಟಿ, 2020-21ರಲ್ಲಿ ರೂ.68.94 ಕೋಟಿ, 2019-20ರಲ್ಲಿ ರೂ.98.92 ಕೋಟಿ, 2018-19ರಲ್ಲಿ92.09 ಕೋಟಿ, 2017-18ರಲ್ಲಿ 95.92 ಕೋಟಿ, 2016-17ರಲ್ಲಿ ರೂ.89.65 ಕೋಟಿ,2015-16ರಲ್ಲಿ ರೂ.88.83 ಕೋಟಿ, 2014-15ಲ್ಲಿ ರೂ77.60 ಕೋಟಿ, 2013-14ರಲ್ಲಿ ರೂ.68 ಕೋಟಿ, 2012-13ರಲ್ಲಿ ರೂ.66.76 ಕೋಟಿ, 2011-12ರಲ್ಲಿ ರೂ.56.24 ಕೋಟಿ ಆದಾಯವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಗಳಿಸಿದೆ.

add - tandoor march 2025
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments