HomeFresh Newsಕುಣಿಗಲ್: ಬೋರ್ ವೆಲ್ ಲಾರಿ-ಕಾರು ನಡುವೆ ಅಪಘಾತ: ದ.ಕ. ಜಿಲ್ಲೆಯ ಇಬ್ಬರು ಮೃತ್ಯು

ಕುಣಿಗಲ್: ಬೋರ್ ವೆಲ್ ಲಾರಿ-ಕಾರು ನಡುವೆ ಅಪಘಾತ: ದ.ಕ. ಜಿಲ್ಲೆಯ ಇಬ್ಬರು ಮೃತ್ಯು

ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ ೩೩ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಇಂದು ಮುಂಜಾನೆ ಸಂಭವಿಸಿದೆ.

ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ ಲೋಬೋ (34) ಎಂದು ಗುರುತಿಸಲಾಗಿದೆ.ನಿತೀಶ್ ಭಡಾರಿ(35), ಪ್ರೀತಿ ಲೋಬೋ(29) ಮತ್ತು ಹರೀಶ್(62) ಎಂಬವರು ತೀವ್ರವಾಗಿ ಗಾಯಗೊಂಡು ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ’ಬೆಂಗಳೂರು ಕಂಬಳ’ವನ್ನು ನೋಡಿಕೊಂಡು ಮಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ ೧:೧೫ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments