HomeFresh Newsಡಿ.19ರಿಂದ 22ರ ವರೆಗೆ ಲ್ಯಾಂಡ್ ಟ್ರೇಡ್ಸ್  ಪ್ರಾಪರ್ಟಿ ಶೋ-2022

ಡಿ.19ರಿಂದ 22ರ ವರೆಗೆ ಲ್ಯಾಂಡ್ ಟ್ರೇಡ್ಸ್  ಪ್ರಾಪರ್ಟಿ ಶೋ-2022

ಲ್ಯಾಂಡ್ ಟ್ರೇಡರ್ಸ್ ಸಂಸ್ಥೆಯು ಹೊಸ ತಲೆಮಾರಿನ ಆಶಯಕ್ಕೆ ಅನುಗುಣವಾಗಿ ನೂತನ ಪರಿಕಲ್ಪನೆಯ ಜೀವನ ಶೈಲಿಯ ಅಪಾರ್ಟ್ಮೆಂಟ್ಗಳ ಸರಣಿಯನ್ನು ಅನುಷ್ಠಾನಗೊಳಿಸಿದ್ದು, ಕುರಿತು ಒಂದೇ ಸೂರಿನಡಿ ಗ್ರಾಹಕರಿಗೆ ಮಾಹಿತಿ ಒದಗಿಸಲು ಡಿ.19ರಿಂದ 22ರ ವರೆಗೆ ಲ್ಯಾಂಡ್ ಟ್ರೇಡ್ಸ್ ಪಾಪರ್ಟಿ ಶೋ ಏರ್ಪಡಿಸಲಾಗಿದೆ.

ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ  ಲ್ಯಾಂಡ್ ಟ್ರೇಡ್ಸ್ ಮತ್ತು ಬಿಲ್ಡ್ ರ್ಸ್ ಮಾಲಕ ಶ್ರೀನಾಥ ಹೆಬ್ಬಾರ್ ಅವರು  ಲ್ಯಾಂಡ್ ಟ್ರೇಡ್ಸ್ ಪಾಪರ್ಟಿ ಶೋದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಪ್ರಮುಖ ಪ್ರಾಪರ್ಟಿ ಡೆವಲಪರ್ ಲ್ಯಾಂಡ್ ಟ್ರೇಡ್ ಸಂಸ್ಥೆಯು, ನೂತನ ಪರಿಕಲ್ಪನೆಯ ಶೈಲಿಯ ಅಪಾರ್ಟ್ ಮೆಂಟ್ಗಳ ಸರಣಿಯನ್ನು ಅನುಷ್ಠಾನ ಗೊಳಿಸಿದೆ. ಎಲ್ಲಾ ವಿನೂತನ ಯೋಜನೆಗಳ ವಿವರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ, ಒದಗಿಸಲು ಡಿಸೆಂಬರ್ 19 ರಿಂದ 22 ರವರೆಗೆ ಮಂಗಳೂರಿನ ಬಲ್ಮಠದ ಕಲೆಕ್ಟರ್ ಗೇಟ್ ಬಳಿಯ ಲ್ಯಾಂಡ್ ಟ್ರೇಡ್ಸ್ ವಾಣಿಜ್ಯ ಹೆಗ್ಗುರುತು ಮೈಲ್ ಸ್ಟೋನ್ವಾಣಿಜ್ಯ ಸಂಕೀರ್ಣದಲ್ಲಿ ಜರಗುವ ಮೇಳವು ಲ್ಯಾಂಡ್ ಟ್ರೇಡ್ ಬಿಲ್ಲರ್ ಆಂಡ್ ಡೆವೆಲಪನ ಯಶಸ್ವೀ 30 ವರ್ಷಗಳ ಆಚರಣೆಯು ಆಗಲಿದೆ. ಅಪಾರ್ಟ್ ಮೆಂಟ್ಸ್ ಖರೀದಿಸ ಬಯಸುವ ಗ್ರಾಹಕರು ಬೆಳಗ್ಗೆ 10 ರಿಂದ ಸಂಜೆ 7 ತನಕ ಯಾವುದೇ ಸಮಯದಲ್ಲಿ ಮೇಳಕ್ಕೆ ಭೇಟಿ ನೀಡಬಹುದು ಮತ್ತು ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.

ವೈಯಕ್ತಿಕ ಅಪಾರ್ಟ್ ಮೆಂಟ್ ಖರೀದಿಗೆ ಸ್ಥಳದಲ್ಲೇ ಕೊಡುಗೆ, ಪ್ರತೀ ಬುಕಿಂಗ್ನಲ್ಲಿ ಚಿನ್ನದ ನಾಣ್ಯ, ಶೂನ್ಯ ಜೆ.ಎಸ್.ಟಿ.ಗಳನ್ನು ಆಯ್ದ ಯೋಜನೆಗಳಲ್ಲಿ ಮತ್ತು ಗೃಹ ಸಾಲದಲ್ಲಿ ಶೂನ್ಯ ನಿರ್ವಹಣಾ ಶುಲ್ಕದ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹು ದು. ಲ್ಯಾಂಡ್ ಟ್ರೇಡ್ಸ್ ಮೇಳದಲ್ಲಿರುವ ಹೋಂ ಲೋನ್ ಕೌಂಟರ್ಗಳ ಮೂಲಕ ಅರ್ಹ ಖರೀದಿದಾರರು ಪಡೆಯಬಹು ಎಂದು ಶ್ರೀನಾಥ್ ತಿಳಿಸಿದ್ದಾರೆ.

ಗ್ರಾಹಕರ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿರುವುದೇ ಲ್ಯಾಂಡ್ ಟ್ರೇಡ್ಸ್ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿದೆಪಾರದರ್ಶಕ ವ್ಯವಹಾರ ಪರಿಪೂರ್ಣ ದಾಖಲೆ ಪತ್ರಗಳಒದಗಣೆ ಒಪ್ಪಂದದ ಸಮಗ್ರ ಅನುಷ್ಠಾನ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ನಮ್ಮ ಪೂರ್ಣ ಬದ್ಧತೆ ಹೊಂದಿದೆ. ನಾವು ಬದ್ಧತೆಯಿಂದ, ಈಡೇರಿಸುತ್ತೇವೆಎನ್ನುತ್ತಾರೆ ಲ್ಯಾಂಡ್ ಟ್ರೇಡ್ ಸಂಸ್ಥೆಯ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್.

ಸಂಸ್ಥೆಯ ಸಿಇಒ ರಮಿತ್ ಅವರು ಮಾಹಿತಿ ನೀಡಿ ಸ್ಮಾರ್ಟ್ ಸಿಟಿಯ ಸ್ಥಾನಮಾನದ ಜತೆಯಲ್ಲಿ ವಿಶ್ವದರ್ಜೆಗೆ ಸಮಾನವಾದ ಜೀವನ ಶೈಲಿಗೆ ಮಂಗಳೂರಿನ ಜನತೆ ಆದ್ಯತೆ ನೀಡುತ್ತಿದ್ದಾರೆಕದ್ರಿಮಲ್ಲಿಕಟ್ಟೆ ಬಳಿಯ ಎತ್ತರದ ಪ್ರದೇಶ ಶಿವಭಾಗ ಯೋಜನೆಯು 54 ಅಂತಸ್ತುಗಳ, 112 ಅರಮನೆ ಸದೃಶ ಲಕ್ಷುರಿ ಹೋಮ್ಗಳ ಗಗನಚುಂಬಿ ರಮಣೀಯ ನಿಸರ್ಗ, ಅತ್ಮಾಧಾನಿಕ ಸೌಲಭ್ಯ ಹೊಂದಿದೆ.

*ಅಲ್ಟೂರ: ಬೆ೦ದೂರ್ವೆಲ್ ನಲ್ಲಿ 12 ಅಂತಸ್ತುಗಳ ಗಗನಚುಂಬಿ ಯೋಜನೆ: 2 ಮತ್ತು 3 ಬಿಹೆಚ್ಕೆ, ಡುಪ್ಲೆಕ್ಸ್ ಗಳ ಸಹಿತ 114ಸೂಪರ್ ಡಿಲಕ್ ವಸತಿ ಯೋಜನೆ.*ಸಾಲಿಟೇರ್ (ವಾಸಕ್ಕೆ ಸಿದ್ಧ): ಹ್ಯಾಟ್ ಹಿಲ್ನಲ್ಲಿ 32 ಅಂತಸ್ತುಗಳ 143 ಲಕ್ಷುರಿ ಅಪಾರ್ಟ್ ಮೆಂಟ್ ಮತ್ತು ಡುಪ್ಲೆಕ್ಸ್ ಗಳು ಅರಬ್ಬಿ ಸಮುದ್ರದ ವಿಹಂಗಮ ನೋಟ. (ಪೂರ್ಣಗೊಂಡ ಯೋಜನೆಯಲ್ಲಿ ಕೆಲವು 2 ಬಿ.ಹೆಚ್.ಕೆ. ಮಾತ್ರಲಭ್ಯವಿದೆ). *ನಕ್ಷತ್ರ: –ಮಣ್ಣಗುಡ್ಡೆ, ಗಾಂಧೀನಗರದ ಪ್ರಶಾಂತ ಪರಿಸರದಲ್ಲಿ ಲಕ್ಸುರಿ ಅಪಾರ್ಟ್ ಮೆಂಟ್ಗಳ ಯೋಜನೆ 1 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೆಲವೇ 2 ಬಿ.ಹೆಚ್ ಕೆ , ಮತ್ತು ಬಿ.ಹೆಚ್ .ಕೆ, ಅಪಾರ್ಟ್ಮೆಂಟ್ ಲಭ್ಯ, *ಅದಿರ : –ಉರ್ವ ಮಾರಿಗುಡಿ ಸಮೀಪ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ಸಂಕೀರ್ಣ, ಆಧುನಿಕ ಸೌಲಭ್ಯಗಳ ಬಿ.ಹೆಚ್ .ಕೆ.ಲಭ್ಯ.

*ಕಾಮತ್ ಗಾರ್ಡನ್:- ಉಳ್ಳಾಲದ ಸುಂದರವಾದ ಹೊರ ವಲಯದಲ್ಲಿ 1.5 ಎಕರೆಯಲ್ಲಿ ಪೂರ್ಣ ಅಭಿವೃದ್ಧಿಗೊಂಡ 15 ಸ್ವತಂತ್ರ ಮನೆಗಳ ವಸತಿ ನಿವೇಶನಗಳು,*ಹ್ಯಾಬಿಟ್ಯಾಟ್ ವನ್ 54೫೪ (ವಾಸಕ್ಕೆ ಸಿದ್ಧವಾಗಿದೆ): –ದೇರೆಬೈಲ್ನಲ್ಲಿ ಸುಲಭ ದರದಲ್ಲಿ 154 ಅಪಾರ್ಟ್ ಮೆಂಟ್ ಗಳಯೋಜನೆ, ಪೂರ್ಣಗೊಂಡ ಯೋಜನೆಯಲ್ಲಿ ಬೆರಳೆಣಿಕೆಯಷ್ಟು ಅಪಾರ್ಟ್ ಮೆಂಟ್ಗಳು ಲಭ್ಯ

*ಎಮರಾಲ್ಡ್ ಬೇ (ಪೂರ್ಣ ಅಭಿವೃದ್ಧಿಗೊಂಡಿದೆ): –ಸುರತ್ಕಲ್ನಲ್ಲಿ ಅರಬ್ಬಿ ಸಮುದ್ರ ಕಿನಾರೆಯಲ್ಲಿ ಮನರಂಜನಾ ಸೌಲಭ್ಯಗಳ ಸಹಿತ, ಸ್ವತಂತ್ರ ವಿಲ್ಲಾಗಳ ನಿರ್ಮಾಣಕ್ಕೆ ವಸತಿ ಬಡಾವಣೆಯಾಗಿದೆ ಎಂದು ಸಂಸ್ಥೆಯ ಸಿಇಒ ರಮಿತ್ ತಿಳಿಸಿದ್ದಾರೆ.

ಇದೇ ವೇಳೆ ಲ್ಯಾಂಡ್ ಟ್ರೇಡರ್ಸ್ ಪಾಪರ್ಟಿ ಶೋದ ಲಾಂಚನವನ್ನು ಬಿಡುಗಡೆಗೊಳಿಸಲಾಯಿತು. ಸಂದರ್ಭದಲ್ಲಿ ಪತ್ರಕರ್ತ ಮನೋಹರ್ ಪ್ರಸಾದ್ ಅವರು ಪೂರಕ ಮಾಹಿತಿ ನೀಡಿದರು.

ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪೋರ್ ವಿಂಡ್ಸ್ ಕಮ್ಯುನಿಕೇಶನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments