ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ತಾವ್ಡೆ ಹೇಳಿದ್ದಾರೆ.

195 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, 34 ಸಚಿವರು ಈ ಪಟ್ಟಿಯಲ್ಲಿ ಇದ್ದಾರೆ. ಈ ಪೈಕಿ 28 ಮಹಿಳೆಯರು, 2ಮಾಜಿ ಸಿಎಂಗಳು ಇದ್ದಾರೆ 50 ವರ್ಷದ ಕೆಳಗಿನ 47 ಅಭ್ಯರ್ಥಿಗಳು ಇದ್ದಾರೆ. 27 ಮಂದಿ ಎಸ್ ಸಿ ಸಮುದಾಯದವರು ಇದ್ದಾರೆ.

ಮೊದಲ ಪಟ್ಟಿಯಲ್ಲಿ ಬಿಜೆಪಿ ಸ್ಪರ್ಧೆಯ ವಿವರ

ಉತ್ತರಪ್ರದೇಶ- 51 ಕ್ಷೇತ್ರಗಳು, ಪಶ್ಚಿಮ ಬಂಗಾಳ- 20, ಪಶ್ಚಿಮ ಬಂಗಾಳ -20,ಗುಜರಾತ್- 15, ರಾಜಸ್ಥಾನ- 15, ಕೇರಳ- 12, ತೆಲಂಗಾಣ -9, ಅಸ್ಸಾಂ -11, ಜಾರ್ಖಂಡ್ -11, ಛತ್ತೀಸಗಡ್- 11, ದೆಹಲಿ -5, ಉತ್ತರಖಂಡ್- 3, ಗೋವಾ- 1, ತ್ರಿಪುರ -1, ಅಂಡಮಾನ್ ನಿಕೋಬರ್- 1

ಮೊದಲ ಪಟ್ಟಿಯಲ್ಲಿರುವ ಪ್ರಮುಖರು ಇವರು: ವಾರಣಾಸಿ- ನರೇಂದ್ರ ಮೋದಿ

ಅರುಣಾಚಲ ವೆಸ್ಟ್- ಕಿರಣ್ ರಿಜಿಜು, ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್, ಚಾಂದನಿ ಚೌಕ್-  ಪ್ರವೀಣ್, ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್, ಗಾಂಧಿನಗರ -ಅಮಿತ್ ಶಾ, ರಾಜ್ ಕೋಟ್- ಪುರುಷೋತ್ತಮ್ ರೂಪಾಲ್, ಪೋರ್ ಬಂದರ್- ಮನ್ಸೂಖ್ ಮಾಂಡವೀಯ, ಉಧಮಪುರ-ಜಿತೇಂದ್ರ ಸಿಂಗ್, ಗೊಡ್ಡಾ-ನಿಶಿಕಾಂತ್ ದುಬೆ, ಕಾಸರಗೊಡು- ಅಶ್ವೀನಿ, ಕೊಡರಮಾ-ಅನ್ನಪೂರ್ಣದೇವಿ, ತಿರುವನಂತಪುರಂ-ರಾಜೀವ್ ಚಂದ್ರಶೇಖರ್, ಖುಂಟಿ-ಅರ್ಜುನ್ ಮುಂಡಾ, ಹಜಾರಿಭಾಗ್-ಮನೀಶ್ ಜೈಸ್ವಾಲ್, ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ, ಪಾಲ್-ಅಲೋಕ್ ಶರ್ಮಾ, ಖಜುರಾಹೋ-ವಿ.ಡಿ.ಶರ್ಮಾ, ಅಲವರ-ಭೂಪೇಂದ್ರ ಯಾದವ್, ಅಂಡಮಾನ್ ನಿಕೋಬಾರ್- ವಿಷ್ಣು ಪಡರೆ, ಅರುಣಾಚಲ ಪೂರ್ವ- ತಾಪಿರ್ ಗಾವೋ, ಕರೀಂಗಂಜ್, ಅಸ್ಸಾಂ – ಕೃಪಾನಾಥ್ ಮಾಲಾ, ಸಿಲ್ಚಾರ್ – ಪರಿಮಳಾ ಶುಕ್ಲವೈದ್ಯ, ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್, ಕೋಟಾ-ಓಂ ಬಿರ್ಲಾ, ಚಿತ್ತೋಡಗಢ್-ಸಿ.ಪಿ.ಜೋಶಿ, ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್,

ಅಲ್ಮೋಡಾ-ಅಜಯ್ ಟಮಟಾ, ಮುಜಫ್ಪರನಗರ-ಸಂಜೀವ್ ಬಲಿಯಾನ್, ಗೌತಮಬುದ್ಧನಗರ-ಮಹೇಶ್ ಶರ್ಮಾ, ಮಧುರಾ-ಹೇಮಾ ಮಾಲಿನಿ,  ಕೈರಾನ್-ಪ್ರದೀಪ್ ಕುಮಾರ್, ಫತೇಪುರಸಿಕ್ರಿ-ರಾಜಕುಮಾರ್ ಚಹರ್, ಸೀತಾಪುರ-ರಾಜೇಶ್ ಶರ್ಮಾ, ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ, ರಾಂಪುರ್ – ಘನಶಾಮ್,  ಮಥುರಾ – ಹೇಮಾಮಾಲಿನಿ, ಉನ್ನಾವ್- ಸಾಕ್ಷಿ ಮಹಾರಾಜ್,ಅಮೇಠಿ- ಸ್ಮೃತಿ ಇರಾನಿ, ಕನೌಜ್ – ಸುಬ್ರತ್ ಪಾಠಕ್, ಫತೇಪುರ್- ಸಾದ್ವಿ ನಿರಂಜನ್ ಜ್ಯೋತಿ, ಫೈಜಾಬಾದ್ (ಅಯೋಧ್ಯಾ)- ಲಲ್ಲು ಸಿಂಗ್, ಲಖನೌ-ರಾಜನಾಥ್ ಸಿಂಗ್, ಝಾನ್ಸಿ-ಅನುರಾಜ್, ಖುಷಿನಗರ-ವಿಜಯ್​ ಕುಮಾರ್, ಗೋರಖಪುರ್-ರವಿ ಕಿಶನ್, ಪಶ್ಚಿಮ ಬಂಗಾಳ (ಕಾಂತಿ) – ಸುವೇಂದು ಅಧಿಕಾರಿ, ಹೂಗ್ಲಿ-ಲಾಕೆಟ್ ಚಟರ್ಜಿ, ಹರ್ದೋಯಿ-ಜಯಪ್ರಕಾಶ್, ಖೇರಿ-ಅಜಯ್ ಮಿಶ್ರಾ, ಅಂಬೇಡ್ಕರ ನಗರ-ರಿತೇಶ್ ಪಾಂಡೆ, ಹಜಾರಿಭಾಗ್-ಮನೀಶ್ ಜೈಸ್ವಾಲ್, ತ್ರಿಶೂರ್-ಸುರೇಶ್ ಗೋಪಿ, ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ, ಗುನಾ ಲೋಕಸಭಾ ಕ್ಷೇತ್ರ-ಜ್ಯೋತಿರಾದಿತ್ಯ ಸಿಂಧಿಯಾ, ಚಾಂದನಿಚೌಕ್ ಲೋಕಸಭಾ ಕ್ಷೇತ್ರ-ಪ್ರವೀಣ್ ಖಂಡೇಲವಾಲಾ ಸ್ಪರ್ಧಿಸಲಿದ್ದಾರೆ. ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿಲ್ಲ.

Related Posts

Leave a Reply

Your email address will not be published.