ಬಂಟ್ವಾಳ: ರಾಜ್ಯ ಸರ್ಕಾದ ವಿರುದ್ಧ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ವತಿಯಿಂದ ಪ್ರತಿಭಟನೆ

ಬಂಟ್ವಾಳ: ವಿಧಾನಸೌಧದಲ್ಲಿ ಪಾಕಿಸ್ಥಾನಕ್ಕೆ ಜಿಂದಾಬಾದ್ ಹೇಳಿದ ಭಯೋತ್ಪಾದಕ ಪ್ರೇಮಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ವತಿಯಿಂದ ಪ್ರತಿಭಟನೆ ಶನಿವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಎಂಟು ತಿಂಗಳ ಅವಧಿಯಲ್ಲಿ ಕರ್ನಾಟಕದ ಆತ್ಮವಾಗಿರುವ ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿರುವುದು ಅವರು ಮಾಡಿರುವ ಸಾಧನೆ. ಇದೊಂದು ನಾಚಿಕೆಗೇಡಿನ ವಿಚಾರ ಎಂದರು. ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು ಇಡೀ ಸರಕಾರ ಆರೋಪಿಗಳ ಪರ ನಿಂತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಆರೋಪಿಗಳು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿ ವೀರೋಚಿತವಾಗಿ ಹೆಜ್ಜೆ ಹಾಕುತ್ತಾರೆಂದರೆ ಈ ದೇಶದ ಪ್ರಜಾಪ್ರಭುತ್ವದ ಗೌರವ ಎಲ್ಲಿಗೆ ಬಂದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಸುಳ್ಳಿನ ಸರಮಾಲೆಯನ್ನು ಕಾಂಗ್ರೆಸ್ ಪಕ್ಷ ಸೃಷ್ಟಿ ಮಾಡುತ್ತಿದೆ. ದೇಶದೋಹಿಗಳಿಗೆ ರಕ್ಷಣೆ ನೀಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದ ಅವರು ನರೇಂದ್ರ ಮೋದಿ ಪ್ರಧಾನಿಯಾದ ಬಳಿ ರಾಷ್ಟದ್ರೋಹಿಗಳಿದ್ದ ಕಾಶ್ಮೀರ ಈಗ ರಾಷ್ಟ್ರ ಪ್ರೇಮಿಗಳ ಸ್ಥಳವಾಗಿದೆ, ರಾಮ ಇಲ್ಲ ಎಂದವರ ಬಾಯಲ್ಲಿ ಜೈ ಸೀತಾರಾಮ್ ಹೆಸರು ಬರುವಂತೆ ಮಾಡಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ರಾಜ್ಯ ಸರ್ಕಾರ ಓಟ್‌ಬ್ಯಾಂಕ್‌ಗಾಗಿ ಎಂತಹ ನೀಚ ಕೆಲಸ ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಸಾಕ್ಷಿಯಾಗಿದೆ. ಪ್ರಜಾಪ್ಭುತ್ವದ ದೇಗುಲವಾಗಿರುವ ವಿಧಾನಸೌದದಲ್ಲಿ ನಮ್ಮ ವೈರಿ ರಾಷ್ಟ್ರ ಪಾಕಿಸ್ಥಾನಕ್ಕೆ ಜೈಕಾರ ಹಾಕುತ್ತಿರುವುದನ್ನು ನಿಯಂತ್ರಸದೆ ಯಾವುದೋ ಆಮಿಷಕ್ಕೆ ಬಲಿ ಬಿದ್ದು ದೇಶದ ಭವಿಷ್ಯಕ್ಕ ಮಾರಕವಾಗುವ ಕೆಲಸ ಮಾಡಲು ಹೊರಟಿರುವುದು ನಾಚಿಗೇಡು ಎಂದರು.
ಕಿಯೋನಿಕ್ಸ್ ನಿಕಟಪೂರ್ವಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ ಪಕ್ಷದ ಪ್ರಮುಖರಾದ ವಿಕಾಸ್ ಪುತ್ತೂರು , ಚೆನ್ನಪ್ಪ ಕೋಟ್ಯಾನ್, ರಾಮದಾಸ್ ಬಂಟ್ವಾಳ, ಡೊಂಬಯ ಅರಳ, ರವೀಶ್ ಕರ್ಕಳ, ದೇವದಾಸ್ ಶೆಟ್ಟಿ
ಸುಲೋಚನ ಜಿ.ಕೆ. ಭಟ್, ತುಂಗಪ್ಪ ಬಂಗೇರ, ಪುರುಷೋತ್ತಮ ಸಾಲ್ಯಾನ್ ನರಿಕೊಂಬು,
ಕಮಲಾಕ್ಷಿ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಅಮ್ಟೂರು, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ಗೋವಿಂದ ಪ್ರಭು, ಸಂತೋಷ್ ರಾಯಿಬೆಟ್ಟು, ಚಿದಾನಂದ ರೈ ಕಕ್ಯ, ಕೇಶವ ದೈಪಲ, ಹರಿಪ್ರಸಾದ್, ರತ್ನಕುಮಾರ್ ಚೌಟ, ಕಿಶೋರ್ ಪಲ್ಲಿಪ್ಪಾಡಿ, ಸುರೇಶ್ ಕುಲಾಲ್, ವಜ್ರನಾಥ ಕಲ್ಲಡ್ಕ, ಸರೇಶ್ ಕೋಟ್ಯಾನ್ ಮತ್ತಿತರ ಪ್ರಮುಖರು ಹಾಜರಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

Related Posts

Leave a Reply

Your email address will not be published.