HomeUncategorizedಲಾಟರಿ ಗಲಾಟೆಯ ಕುಟುಂಬ | ಒಂದೇ ಕುಟುಂಬದ ಮೂವರು | ಮೂರು ಪಕ್ಷಗಳಿಂದ ಗೆಲುವು

ಲಾಟರಿ ಗಲಾಟೆಯ ಕುಟುಂಬ | ಒಂದೇ ಕುಟುಂಬದ ಮೂವರು | ಮೂರು ಪಕ್ಷಗಳಿಂದ ಗೆಲುವು

ಹಣ ಏನೆಲ್ಲ ಮಾಡುತ್ತದೆ ನೋಡಿ, ಲಾಟರಿ ವ್ಯವಹಾರ ಹಾಗೂ ಅವ್ಯವಹಾರದ ಆರೋಪ ಹೊತ್ತ ಒಂದು ಕುಟುಂಬದ ಮೂವರು ಮೂರು ಪಕ್ಷಗಳಿಂದ ಸ್ಪರ್ಧಿಸಿ ತಮಿಳುನಾಡು ವಿಧಾನ ಸಭೆ ಪ್ರವೇಶಿಸಿದ್ದಾರೆ.ಸ್ಯಾಂಟಿಯಾಗೋ ಮಾರ್ಟಿನ್ ಲಾಟರಿ ವ್ಯವಹಾರ ಹಾಗೂ ಅವ್ಯವಹಾರದಿಂದ ಕೋಟಿ ಕೋಟಿ ಗಳಿಸಿದ್ದಾರೆ. ಆ ಕೋಟಿಗಳ ಮೂಲಕ ಅವರ ಕುಟುಂಬದ ಮೂವರು ತಮಿಳುನಾಡು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಅದರಲ್ಲೂ ಮೂವರೂ ಮೂರು ಬೇರೆ ಬೇರೆ ಪಕ್ಷಗಳಿಂದ ಗೆದ್ದಿದ್ದಾರೆ.
ಸ್ಯಾಂಟಿಯಾಗೋ ಮಾರ್ಟಿನ್‌ರ ಮಡದಿ ಲೀಮಾರೋಸ್ ಮಾರ್ಟಿನ್‌ರು ತಮಿಳುನಾಡಿನ ಲಾಲ್ಗುಡಿ ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷದಿಂದ ಗೆದ್ದರುವರು. ಸ್ಯಾಂಟಿಯಾಗೋ ಮಾರ್ಟಿನ್‌ರ ಮಗ ಜೋಸ್ ಚಾರ್ಲ್ಸ್ ಮಾರ್ಟಿನ್ ಪುದುಚೇರಿಯ ಕಾಮರಾಜ ನಗರ್ ಕ್ಷೇತ್ರದಿಂದ ಎಲ್‌ಜೆಕೆ ಪಕ್ಷದ ಅಭ್ಯರ್ಥಿಯಾಗಿ ಜಯಿಸಿದ್ದಾರೆ. ಸ್ಯಾಂಟಿಯಾಗೋ ಮಾರ್ಟಿನ್‌ರ ಮಗಳ ಗಂಡ ಅಳಿಯ ಆದವ್ ಅರ್ಜುನ್ ತಮಿಳುನಾಡಿನ ವಿಕ್ಕಿವಾಕಂ ಕ್ಷೇತ್ರದಲ್ಲಿ ಟಿವಿಕೆ ಪಕ್ಷದ ಸ್ಪರ್ಧಿಯಾಗಿ ವಿಜಯಿಯಾಗಿದ್ದಾರೆ. ತಮಿಳುನಾಡಿನ ಎರಡು ಕ್ಷೇತ್ರ ಡಿಎಂಕೆ ವಶವಿತ್ತು, ಪಾಂಡಿಚೇರಿಯ ಕ್ಷೇತ್ರ ಕಾಂಗ್ರೆಸ್ಸಿನದಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments