ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಹಾಸಭೆ :ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಆಯ್ಕೆ
ಪುತ್ತೂರು, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾ ಸಭೆಯು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದಿವಂಗತ ವಸಂತ ಬಂಗೇರ ವೇದಿಕೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರಾದ ಪೀತಾಂಬರ ಹೆರಾಜೆಯವರು ವಹಿಸಿ ಮಾತನಾಡಿ ವಿಶ್ವ ಬಿಲ್ಲವರು ಸೇರಿ ನಿರ್ಮಿಸಿದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಇಂದು ವಿಶ್ವ ಪ್ರಸಿದ್ಧಿಯಾಗಿ ಭಕ್ತರ ಕಷ್ಟ ಕಾರ್ಪಣ್ಯವನ್ನು ನೀಗುವ ಧಾರ್ಮಿಕ ಕೇಂದ್ರವಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿದರು ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ನೂತನ ಪಧಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಶ್ರೀ ಪೀತಾಂಬರ ಹೆರಾಜೆ, ಅಧ್ಯಕ್ಷರಾಗಿ ಶ್ರೀ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ರಾಜಾರಾಂ ಉಪ್ಪಿನಂಗಡಿ, ಉಪಾಧ್ಯಕ್ಷ ರಾಗಿ ಉಲ್ಲಾಸ್ ಕೋಟ್ಯಾನ್, ದೀಪಕ ಕೋಟ್ಯಾನ್ ಗುರುಪುರ, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಂಜೂರು, ಜೊತೆಕಾರ್ಯ ದರ್ಶಿಗಳಾಗಿ ಜಯವಿಕ್ರಂ ಕಲ್ಲಾಪು,ಹರೀಶ್ ಕೆ ಪೂಜಾರಿ, ಗಲ್ಫ್ ರಾಷ್ಟ್ರಗಳ ಸಂಚಾಲಕರಾಗಿ ಸತೀಶ್ ಪೂಜಾರಿ ಬೆಳಪು ದುಬೈ, ಮುಂಬೈ ಸಂಚಾಲಕರಾಗಿ ನಿತ್ಯಾನಂದ ಕೋಟ್ಯಾನ್, ಮಹಿಳಾ ಸಂಚಾಲಕರಾಗಿ ಸುಜಿತ ವಿ ಬಂಗೇರ ಬೆಳ್ತಂಗಡಿ, ಹೊರರಾಜ್ಯಗಳ ಸಂಚಾಲಕರಾಗಿ ಚಂದ್ರಹಾಸ್ ಅಮೀನ್ ಗೋವಾ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಕಂಕನಾಡಿ ಗರಡಿ ಅಧ್ಯಕ್ಷ ಶ್ರೀ ಕೆ ಚಿತ್ತರಂಜನ್ ಮತ್ತು ಮಾಜಿ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರ ಮಾರ್ಗದರ್ಶನದಲ್ಲಿ ಆಯ್ಕೆ ನಡೆಸಲಾಯಿತು.