HomeFresh Newsಮಳಲಿ ಮಸೀದಿ ವಿವಾದ :ಮಂಗಳೂರು ಕೋರ್ಟ್‍ನಲ್ಲಿ ಇಂದು ತೀರ್ಪು ಸಾಧ್ಯತೆ

ಮಳಲಿ ಮಸೀದಿ ವಿವಾದ :ಮಂಗಳೂರು ಕೋರ್ಟ್‍ನಲ್ಲಿ ಇಂದು ತೀರ್ಪು ಸಾಧ್ಯತೆ

ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ಇಂದು ನೀಡುವ ಸಾಧ್ಯತೆ ಇದೆ.

ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‍ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆ ವಾದ ವಿವಾದ ನಡೆದು ಕಳೆದ ಅಕ್ಟೋಬರ್ 17ರಂದು ಆದೇಶವನ್ನು ಮತ್ತೆ ನವೆಂಬರ್ 9ಕ್ಕೆ ಮುಂದೂಡಿತ್ತು. ಅದರಂತೆ ಇಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments