HomeFresh Newsಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಎಗರಿಸಿದ ಖದೀಮರು -ವಿಟ್ಲ ಠಾಣೆಯ ಪೊಲೀಸರು ಭೇಟಿ,...

ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಎಗರಿಸಿದ ಖದೀಮರು -ವಿಟ್ಲ ಠಾಣೆಯ ಪೊಲೀಸರು ಭೇಟಿ, ತನಿಖೆ

ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲೊಂದಾದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಯಾರೋ ಖದೀಮರು ಎಗರಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.ಕೆಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆಗೆ ಅಪಾರ ಮಹಿಮೆ ಇದೆ.

kalavu

ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಇಲ್ಲಿನ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಕಾಣಿಕೆ ಹಾಕಿ ಹೋಗುತ್ತಾರೆ. ನಿನ್ನೆ ರಾತ್ರಿ ಯಾರೋ ಖದೀಮರು ಕಾಣಿಕೆ ಹುಂಡಿಯನ್ನು ಎಗರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments