HomeFresh Newsಮಂಡೆಕೋಲು: ಇಂದಿನಿಂದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ...

ಮಂಡೆಕೋಲು: ಇಂದಿನಿಂದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ

ಸುಳ್ಯ::ಮಂಡೆಕೋಲು ಗ್ರಾಮದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿದ್ದು, ಫೆ. 22ರ ವರೆಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗದೇವರು ಮತ್ತು ಇರುವೆರು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ.

ಸಾನಿಧ್ಯದಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಹಸಿವಾಣಿ ಮೆರವಣಿಗೆ, ಉಗ್ರಾಣ ತುಂಬಿಸುವ ಕಾರ್ಯಕ್ರಮಗಳು ನಡೆದವು. ಫೆ.22ರಂದು ಬ್ರಹ್ಮಕಲಶ ಪೂಜೆ, ಶ್ರೀ ನಾಗದೇವರು, ಉಳ್ಳಾಕುಲು ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.

ಫೆ.22ರಂದು ರಾತ್ರಿ 7 ಗಂಟೆಗೆ ಸಮರ್ಥ ಸಾಂಸ್ಕೃತಿಕ ಕಲಾ ತಂಡ ಈಶ್ವರಮಂಗಲ ಇವರಿಂದ ನೃತ್ಯ ವೈಭವ ನಡೆಯಲಿದೆ. ರಾತ್ರಿ 8 ಗಂಟೆಗೆ ಗಯಾಪದ ಕಲಾವಿದೆರ್ ಉಬಾರ್ ತಂಡದಿಂದ ನಾಗಮಾಣಿಕ್ಯ ರೋಚಕ ಕಥಾ ಸಂಗಮ ಪೌರಾಣಿಕ ಚಾರಿತ್ರಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 27 ಮತ್ತು 28ರಂದು ಇರುವೆರ್ ಉಳ್ಳಾಕುಲು ನೇಮ ನಡಾವಳಿ, ಉಪದೈವಗಳ ಕೋಲ ನಡೆಯಲಿದೆ. ಗಂಧ ಪ್ರಸಾದ ವಿತರಣೆ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಗವದ್ಭಕ್ತರಾದ ತಾವೇಲ್ಲರೂ ಆಗಮಿಸಿ ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಬೈಲುವಾರು ಸಂಚಾಲಕರು, ಜೀರ್ಣೋದ್ಧಾರ ಸಮಿತಿಯವರು ವಿನಂತಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments