HomeFresh Newsಮಂಗಳೂರು : ಚೇತನಾ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

ಮಂಗಳೂರು : ಚೇತನಾ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಮಕ್ಕಳ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನರಿಂಗಾನದ ಯೆನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಫ್ರಿನ್ಸಿಪಾಲ್ ಡಾ. ಕೆ. ಶಿವಪ್ರಸಾದ್ ಅವರು ಆಗಮಿಸಿ ಧ್ವಜಾರೋಣ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ ಸಹಕರಿಸಿದರು.

ಈ ಸಂಧರ್ಭದಲ್ಲಿ ಡಾ. ಕೆ. ಶಿವಪ್ರಸಾದ್ ಅವರು ಮಾತನಾಡಿ, ಮಕ್ಕಳನ್ನು ಕಾರ್ಯಕ್ರಮಕ್ಕೆ ತಯಾರು ಮಾಡುವಲ್ಲಿ ಶಾಲೆಯ ಶಿಕ್ಷಕರ ಶ್ರಮವನ್ನು ಬಹುವಾಗಿ ಶ್ಲಾಘಿಸಿದರು. ಹಾಗೂ ಸಂಸ್ಥೆಗೆ ಈಗಾಗಲೇ ತಮ್ಮ ಸೇವೆಯನ್ನು ನೀಡುತ್ತಿದ್ದು ಇನ್ನು ಮುಂದೆಯೂ ಸಂಪೂರ್ಣ ಸಹಕಾರ, ಸೇವೆಯನ್ನು ನೀಡುವುದಾಗಿ ಭರವಸೆ ನೀಡಿದರು.

ಶಾಲಾ ಮಕ್ಕಳಿಂದ ಕವಾಯತು ನಡೆಯಿತು. ಮತ್ತು ದೇಶಭಕ್ತಿಗೀತೆ ಹಾಡಲಾಯಿತು.

ಕಾರ್ಯಕ್ರಮವನ್ನು ವಿಶೇಷ ಶಿಕ್ಷಕಿ ರೇಖಾ ಅವರು ನಿರೂಪಿಸಿದರು. ಈ ಸಂದರ್ಭದಲ್ಲಿ, ಸೇವಾಭಾರತಿ ಸಂಸ್ಥೆಯ ಕೋಶಾಧಿಕಾರಿ ಪಿ ವಿನೋದ್ ಶೆಣೈ, ಹಿರಿಯ ಸ್ವಯಂಸೇವಕರಾದ ಉಮೇಶ್ ಶೆಣೈ, ಇತರ ವಿಶ್ವಸ್ಥರು, ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ, ಸ್ವಯಂಸೇವಕರು, ಪೋಷಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments