HomeFresh Newsಮಂಗಳೂರು ಪ್ರೀಮಿಯರ್ ಕಬಡ್ಡಿಲೀಗ್ : ಖಾದ್ಯ ಪ್ರಿಯರಿಗಾಗಿ ಫುಡ್ ಫೆಸ್ಟಿವಲ್

ಮಂಗಳೂರು ಪ್ರೀಮಿಯರ್ ಕಬಡ್ಡಿಲೀಗ್ : ಖಾದ್ಯ ಪ್ರಿಯರಿಗಾಗಿ ಫುಡ್ ಫೆಸ್ಟಿವಲ್

ವಿ.ಆರ್. ಯುನೈಟೆಡ್ ಮಂಗಳೂರು ಸಂಸ್ಥೆ ವತಿಯಿಂದ ಅ. 18ರಿಂದ 20ರ ವರೆಗೆ ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ನಗರದ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಆಹಾರ ಉತ್ಸವ ಏರ್ಪಡಿಸಲಾಗಿದೆ.

ಪ್ರೊಕಬಡ್ಡಿ ಆಟಗಾರರನ್ನೊಳ ಗೊಂಡಂತೆ ಒಟ್ಟು 8 ತಂಡಗಳು ಈ ಕಬಡ್ಡಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿ ಆರ್ ಯುನೈಟೆಡ್ ಸಂಸ್ಥೆ ಕೋಶಾಕಾರಿ ಸುದೇಶ್‌ ಭಂಡಾರಿ ಇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆ. 18ರಂದು ಆಹಾರ ಉತ್ಸವವನ್ನು ಶಾಸಕ ವೇದವ್ಯಾಸ ಕಾಮತ್‌ ಉದ್ಘಾಟಿ ಸುವರು. 19ರಂದು ಕಬಡ್ಡಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. 20ರಂದುಕಬಡ್ಡಿ ಫೈನಲ್ ಪಂದ್ಯ ನಡೆಯಲಿದ್ದು, . ಈ ವೇಳೆ ಡಾ| ಎ. ಸದಾನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಪ೦ದ್ಯಾಟದಲ್ಲಿ ಜನರ ಮಾಲಕತ್ವದಬಳಿಯ 8 ತಂಡಗಳು ಇವೆ. ಈಗಾಗಲೇ ತಂಡದ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಪ್ರೊ ಕಬಡ್ಡಿ ಆಟಗಾರರಾದ ಮನೋಜ್‌ ಗೌಡ, ರಕ್ಷಿತ್ ಪೂಜಾರಿ, ಆದರ್‌ ಕಾಸರಗೋಡು ಪಾಲ್ಗೊಳ್ಳುತ್ತಿ ದ್ದಾರೆ. ಎಲ್ಲ ಮಾಲಕರೂ ತಮ್ಮ ತಂಡಕ್ಕೆ 10ರಿಂದ 12 ಆಟಗಾರರನ್ನು ಕೊಂಡುಕೊಂಡಿದ್ದಾರೆ.

ವಿ.ಆರ್.ಯುನೈಟೆಡ್ ಸಂಸ್ಥೆ ಅಧ್ಯಕ್ಷ ಅಝರ್ ರಝಾಕ್, ಉಪಾಧ್ಯಕ್ಷ ಹರೀಶ್ ನಾಯಕ್, ಕಾರ್ಯದರ್ಶಿ ಮನೋಜ್ ಕುಮಾರ್, ಕರುಣಾಕರ ಎಂ.ಎಸ್., ಪ್ರವೀಣ್ ಕೊಡಿಯಾಲ ಬೈಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments