HomeFresh Newsಬಿಸಿ ರೋಡ್‍ನ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ: ನಳಿನ್

ಬಿಸಿ ರೋಡ್‍ನ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ: ನಳಿನ್

ಬಂಟ್ವಾಳ: 26.18 ಕೋಟಿ ರೂ ಅನುದಾನದ ಮೂಲಕ ಸುಸಜ್ಜಿತವಾದ ರೈಲ್ವೆ ನಿಲ್ದಾಣವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನುದಾನ ಬಿಡುಗಡೆಯಾಗಿದ್ದು,ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಂಗಳೂರು ಸಂಸದ ,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದರು.

ಅವರು ಬಿಸಿರೋಡಿನ ರೈಲ್ವೆ ನಿಲ್ದಾಣಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ದವರ ಜೊತೆ ಮಾತನಾಡಿ ಈ ವಿಚಾರವನ್ನು ತಿಳಿಸಿದರು.

ನಮ್ಮ ಬೇಡಿಕೆಯಂತೆ ಜಿಲ್ಲೆಯ ಮೂರು ರೈಲ್ವೆ ನಿಲ್ದಾಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ಈಗಾಗಲೇ ಮಂಗಳೂರಿನ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಶಿಲ್ಯಾನ್ಯಾಸ ಕಾರ್ಯಕ್ರಮ ಮಾಡಲಾಗಿದೆ.ಬಂಟ್ವಾಳದ ಈ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರೂ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.

ಇದರ ಮಾಸ್ಟರ್ ಪ್ಲಾನ್ ಕೂಡ ತಯಾರಿಸಿದೆ. ಸಂಪೂರ್ಣವಾಗಿ ಹೊಸ ಪರಿವರ್ತನೆಗೊಂಡು, ಮೂಲಭೂತ ಸೌಕರ್ಯಗಳಿಗೆ ಶುಚಿತ್ವ ಆದ್ಯತೆ ಕೊಟ್ಟು ಜನರ ಇಚ್ಛೆಯಂತೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಹಣ ಬಿಡುಗಡೆ ಮಾಡಿದ್ದಾರೆ.

ರಾಜೇಶ್ ನಾಯ್ಕ್ ಶಾಸಕರಾದ ಬಳಿಕ ಬಂಟ್ವಾಳದ ಸಮಸ್ಯೆಗಳಿಗೆ ಕೇಂದ್ರದಿಂದ ಆಗಬೇಕಾದ ಪರಿಹಾರಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದರು.ಅದರಂತೆ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಆದ್ಯತೆಯ ಮೇಲೆ ಕೇಂದ್ರದ ಮೂಲಕ ಅನುದಾನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಮಳೆಗಾಲದಲ್ಲಿ ಮಳೆ ನೀರು ಬೀಳದಂತೆ ಮೇಲ್ಚಾವಣಿ ನಿರ್ಮಾಣ, ಎರಡು ಸುಸಜ್ಜಿತ ಪ್ಲಾಟ್ ಫಾರಂ ನಿರ್ಮಾಣ , ಸುಸಜ್ಜಿತ ಕಟ್ಟಡ ನಿರ್ಮಾಣ, ಸರ್ಕ್ಯೂಲೇಟ್ ಏರಿಯಾ , ಪಾರ್ಕಿಂಗ್, ಪಾರ್ಕ್, ರಸ್ತೆ, ಶೌಚಾಲಯ, ಕ್ಯಾಂಟೀನ್ ಸಹಿತ ರೈಲ್ವೆ ಇಲಾಖೆಯ ಸಂಪೂರ್ಣ ವಾದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಅವರು ಹೇಳಿದರು .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments