ಮಂಗಳೂರು: ಸಾಮಾಜಿಕ ಮುಂದಾಳು ಮುಮ್ತಾಜ್ ಆಲಿ ಮೃತದೇಹ ಪತ್ತೆ

ಮರ್ಮ ರೀತಿಯಲ್ಲಿ ನಾಪತ್ತೆಯಾಗಿದ್ದ ಮಂಗಳೂರು ಬಡಗಣ ಕ್ಷೇತ್ರದ ಮಾಜೀ ಶಾಸಕ ಮೊಯ್ದಿನ್ ಬಾವಾ ಅವರ ಸಹೋದರ ಮಮ್ತಾಜ್ ಆಲಿ ಖಾನ್ ಅವರ ಮೃತ ದೇಹವು ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಪಕ್ಕದಲ್ಲೇ ಪತ್ತೆಯಾಗಿದೆ.


ಅವರ ಕಾರು ಅಪಘಾತ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಕೀ ಮತ್ತು ಮೊಬಾಯಿಲ್ ಕೂಡ ಸಿಕ್ಕಿತ್ತು. ಮಮ್ತಾಜ್ ಆಲಿ ಖಾನ್ ತಾಕೊಲೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿತ್ತು. ರಕ್ಷಣಾ ತಂಡಗಳು ಕೂಡಲೆ ಹುಡುಕಾಟದಲ್ಲಿ ತೊಡಗಿದರೂ ಒಂದು ದಿನದಷ್ಟು ಕಾಲ ದೇಹ ಸಿಕ್ಕಿರಲಿಲ್ಲ.

ಈಶ್ವರ ಮಲ್ಪೆ ಸಹಿತ ಏಳು ಮಂದಿ ಸ್ಕೂಬಾ ಡೈವರ್‌ಗಳು ಹುಡುಕಾಟ ನಡೆಸಿದರು. ಅಂತಿಮವಾಗಿ ದೇಹ ಸಿಕ್ಕಿದೆ. ಈ ಮಧ್ಯೆ ರೆಹಮತ್ ಎಂಬ ಮಹಿಳೆ ಸುಳ್ಳು ಹೇಳಿ ಬ್ಲಾಕ್ ಮೆಯಿಲ್ ಮಾಡುತ್ತಿರುವುದಾಗಿ ಹೇಳಲಾಗಿದ. ಆಕೆ ಮತ್ತು ಗಂಡಸರು ಸೇರಿ ಏಳು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ೫೦ ಲಕ್ಷ ಪಡೆದಿರುವ ಆರೋಪಿಗಳು ಮತ್ತೆ ೫೦ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಮಮ್ತಾಜ್ ಆಲಿ ಖಾನ್ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

Related Posts

Leave a Reply

Your email address will not be published.