HomeFresh Newsಮನೆ ಮಾಲೀಕನನ್ನು ಕೂಡಿಹಾಕಿ ದರೋಡೆ : ಮೂಡುಬಿದರೆ ಪ್ರಾಂತ್ಯ ಗ್ರಾಮದಲ್ಲಿ ನಡೆದ ಘಟನೆ

ಮನೆ ಮಾಲೀಕನನ್ನು ಕೂಡಿಹಾಕಿ ದರೋಡೆ : ಮೂಡುಬಿದರೆ ಪ್ರಾಂತ್ಯ ಗ್ರಾಮದಲ್ಲಿ ನಡೆದ ಘಟನೆ

ಮೂಡುಬಿದಿರೆ ಪ್ರಾಂತ್ಯ ಗ್ರಾಮದ ನಿವಾಸಿಯೊಬ್ಬರು ಉಪ್ಪಿನಂಗಡಿಯಲ್ಲಿರುವ ತಾಯಿಯ ಆರೋಗ್ಯ ವಿಚಾರಿಸಿ ತನ್ನ ಮನೆಗೆ ಮರಳಿದಾಗ ಅವರ ಸಂಬಂಧಿಕರು ಕೂಡಿ ಹಾಕಿ ದರೋಡೆ ಮಾಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿ ಪ್ರಾಂತ್ಯ ಗ್ರಾಮದ ಅತ್ತೂರು ನಸೀಬ್ ಎಂಬವರು ತಾಯಿ ಆರೋಗ್ಯ ವಿಚಾರಿಸಿ ತಮ್ಮ ಮನೆಗೆ ನ.11ರಂದು ಬಂದಾಗ, ಅವರ ಮಾವ ಇಸ್ಮಾಯಿಲ್, ತೋಡಾರು ಶರೀಫ್ ಹಾಗೂ ಇತರ ನಾಲ್ವರು ಮನೆಯಲ್ಲಿದ್ದ ಟಿ.ವಿ, ಡಿವಿಡಿ, 3-ಎಸಿ, 1 ಸೋಫಾ ಸೆಟ್, ಡೈನಿಂಗ್ ಟೇಬಲ್, ಫ್ರಿಡ್ಜ್, ಗ್ರೈಂಡರ್, ವಾಷಿಂಗ್ ಮೆಷಿನ್, ಪಾಸ್‍ಬುಕ್, ಚೆಕ್‍ಬುಕ್ ಮುಂದಾದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ತಡೆಯಲು ಹೋದ ಅತ್ತೂರು ನಸೀಬ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೋಣೆಯಲ್ಲಿ ಕೂಡಿ ಹಾಕಿ ಮನೆಯ ಸಾಮಾಗ್ರಿಗಳನ್ನು ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments