ಮೂಡುಬಿದಿರೆಯ ಬಿ ಶ್ರೀನಿವಾಸ ಬಾಳಿಗ ಇನ್ನಿಲ್ಲ

ಮೂಡುಬಿದಿರೆ : ಇಲ್ಲಿನ ಮೆ. ಜಿ ನಾಗೇಶ್ ಪೈ ಅಂಡ್ ಕೋಸಂಸ್ಥೆಯ ಸ್ಥಾಪಕ ಪಾಲುದಾರ ,ಹಿರಿಯ ವರ್ತಕ ಬಿ ಶ್ರೀನಿವಾಸ ಬಾಳಿಗಾ (89 )
ಏಪ್ರಿಲ್ 16ರಂದು ಸ್ವರಾಜ್ಯ ಮೈದಾನ ಬಳಿ ಇರುವ ಗುರುಕೃಪಾ ನಿವಾಸದಲ್ಲಿ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪ್ರಸ್ತುತ ವ್ಯವಹಾರವನ್ನು ಪಾಲುದಾರರಾಗಿ ಮುನ್ನಡೆಸುತ್ತಿರುವ ಬಿ ಗಣೇಶ್ ಬಾಳಿಗಾ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾತ್ವಿಕ ಮತ್ತು ಧಾರ್ಮಿಕ ಮನೋಭಾವದವರಾಗಿದ್ದ ಬಾಳಿಗ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಹವ್ಯಾಸಿ ಛಾಯಾಗ್ರಾಹಕರಾಗಿ 60ರ ದಶಕದಲ್ಲಿ ಉತ್ಸಾಹದಿಂದ ಛಾಯಾಗ್ರಹಣವನ್ನು ನಡೆಸಿದ್ದ ಅವರು 1967 ರಲ್ಲಿ ಮದ್ರಾಸ್ ನಲ್ಲಿ ನಡೆದಿದ್ದ ಭಾರತ ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆದು ಸಂಭ್ರಮಿಸಿದ್ದರು. ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮೂರು ಅವಧಿಗೆ ಮೊಕ್ತೇಸರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.