HomeFresh Newsಬೈಕ್‌ಗೆ ಢಿಕ್ಕಿ ಹೊಡೆದ ಬಸ್‌: ಕಾಲೇಜು ವಿದ್ಯಾರ್ಥಿ ಸಾವು

ಬೈಕ್‌ಗೆ ಢಿಕ್ಕಿ ಹೊಡೆದ ಬಸ್‌: ಕಾಲೇಜು ವಿದ್ಯಾರ್ಥಿ ಸಾವು

ಮೂಡುಬಿದಿರೆ : ಖಾಸಗಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ, ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಬಳಿ ಸೋಮವಾರ ಸಂಜೆ ನಡೆದಿದೆ. ಎಂಬಲ್ಲಿ ಖಾಸಗಿ ಬಸ್‌ ಬೈಕ್‌ಗೆ ಆಳ್ವಾಸ್‌ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ರಾಜೇಶ್ವರೀ ಜ್ಯುವೆಲ್ಲ‌ರ್ಸ್ ನ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್‌ ಆಚಾರ್ಯ ಮೃತಪಟ್ಟ ವಿದ್ಯಾರ್ಥಿ.

ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷ ಎಂಬವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಕಾರ್ತಿಕ್ ಅವರು ಕಾಲೇಜು ಮುಗಿಸಿ ತನ್ನ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಮತ್ತೊಂದು ಬಸ್ಸನ್ನು ಓವರ್‌ಬೇಕ್ ಮಾಡುವ ಭರದಲ್ಲ ತೀರ ಬಲಭಾಗಕ್ಕೆ ಚಲಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರ್ತಿಕ್‌ ಹೆಲ್ಮೆಟ್ ಧರಿಸಿದ್ದರೂ ಬಸ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಮಾಯಕನ ಜೀವ ಬಲಿಯಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಸ್‌ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments