ಮೂಡುಬಿದಿರೆ:ಬಿಡುಗಡೆಯಾಗದ ಅನುದಾನ ಅರ್ಧದಲ್ಲಿಯೇ ನಿಂತ ಅನೇಕ ಫಲಾನುಭವಿಗಳ ಮನೆ
ವಸತಿ ಯೋಜನೆಗಳಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಮಂಜೂರಾತಿ ಆದೇಶ ನೀಡಿದ ಅನೇಕ ಪಲಾನುಭವಿಗಳ ಮನೆಗಳು ಅನುದಾನ ಇಲ್ಲದೆ ಅರ್ಧದಲ್ಲಿ ನಿಂತಿವೆ. ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಫಲಾನುಭವಿಗಳ ಜತೆಗೂಡಿ ಮರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದರು.
ಪುರಸಭೆ ವಿಶೇಷ ಸಭೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಇದೀಗ ಮನೆಗಳಿಗೆ, ಹೊಸ ಪಲಾನುಭವಿಗಳ ಆಯ್ಕೆ ನಡೆಯುತ್ತಿದೆ. ಅರ್ಜಿ ಸಂದರ್ಭ ಕೇಳುವ ಕೆಲವು ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ಅನೇಕ ಮಂದಿ ಯೋಜ ನೆಯಿಂದ ವಂಚಿತರಾಗುತ್ತಿದ್ದು ಅವರೆಲ್ಲಾ ನಮ್ಮನ್ನು ಪ್ರಶ್ನಿಸುವಂತಾಗಿದೆ ಎಂದು ಸದಸ್ಯ ಸುರೇಶ್ ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಕೆಲವರಿಗೆ ಹಕ್ಕುಪತ್ರ ಸಿಕ್ಕಿದರೂ ಇನ್ನೂ ಸ್ಥಳ ಗುರುತಿಸಿಲ್ಲ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪುರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ಇದ್ದುದರಿಂದ ಕೋವಿಡ್ ನಂತರ ಪಲಾನುಭವಿಗಳಗೆ ಅನುದಾನ ಸಿಗುವಲ್ಲಿ ತೊಂದರೆ ಆಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ತನೂರಿಯಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಯ ಒಳಗೆ ಪಲಾನುಭವಿಗಳಿಗೆ ಜಿಲ್ಲಾಧಿಕಾರಿಯ ಅನುಮತಿ ಪಡೆದು ಮಂಜೂರಾತಿ ಆದೇಶ ನೀಡುವುದಾಗಿ ಮುಖ್ಯಾಧಿಕಾರಿ ಇಂದು ಸಭೆಗೆ ತಿಳಿಸಿದರು. ಹೌಸಿಂಗ್ ಎಂಜಿನಿಯರ್ ಗಿರೀಶ್ ಪೈ ಉಪಸ್ಥಿತರಿದ್ದರು.ಪುರಸಭೆ ಸದಸ್ಯರಾದ ಕೊರಗಪ್ಪ, ಜೊಸ್ಸಿ ಮಿನೇಜಸ್, ಇಕ್ಬಾಲ್ ಕರಿಂ, ದಿನೇಶ್ ಕುಮಾರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.