HomeFresh Newsಮದುವೆ ನಿಶ್ಚಯವಾಗಿದ್ದ ಯುವಕ ಆತ್ಮಹತ್ಯೆ

ಮದುವೆ ನಿಶ್ಚಯವಾಗಿದ್ದ ಯುವಕ ಆತ್ಮಹತ್ಯೆ

ಮೂಡುಬಿದಿರೆ: ಮದುವೆ ನಿಶ್ಚಯವಾಗಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಇರುವೈಲಿನಲ್ಲಿ ನಡೆದಿದೆ.ಇರುವೈಲು ಗುಂಡಾಲ ಮನೆಯ ಸದಾನಂದ ಶೆಟ್ಟಿ ಅವರ ಪುತ್ರ ಪ್ರತಾಪ್ ಶೆಟ್ಟಿ( 30)ಆತ್ಮಹತ್ಯೆ ಮಾಡಿಕೊಂಡ ಯುವಕ. ಕೃಷಿಕನಾಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಜ.22ರಂದು ಮದುವೆ ನಿಶ್ಚಯವಾಗಿತ್ತು. ಸಾಧು ಸ್ವಭಾವದ ಯುವಕನಾಗಿದ್ದ ಈತನಿಗೆ ಆರ್ಥಿಕವಾಗಿ ತೊಂದರೆ ಇರಲಿಲ್ಲ.ಆದರೆ ವಿಡಿಯೋ ಕಾಲ್ ಜಾಲಕ್ಕೆ ಸಿಲುಕಿಕೊಂಡಿರಬಹುದೇ ಎಂಬ ಸಂಶಯ ಉಂಟಾಗಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments