ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ , ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಆಯ್ಕೆ

ಮೂಡುಬಿದಿರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಪ್ರತಿನಿಧಿ ಯಶೋಧರ ವಿ. ಬಂಗೇರ, ಕಾರ್ಯದರ್ಶಿಯಾಗಿ ವಿ4 ನ್ಯೂಸ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ್ತಿ ಪ್ರೇಮಶ್ರೀ ಕಲ್ಲಬೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪ್ರತಿನಿಧಿ ಬೆಳುವಾಯಿ ಸೀತಾರಾಮ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ಹರೀಶ್ ಕೆ . ಆದೂರು
ಕೋಶಾಧಿಕಾರಿಯಾಗಿ ಕನ್ನಡಪ್ರಭ ಪ್ರತಿನಿಧಿ ಎಂ. ಗಣೇಶ್ ಕಾಮತ್ ಆಯ್ಕೆಯಾಗಿದ್ದಾರೆ.

ನಿರ್ಗಮನ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಗಮನ ಕಾರ್ಯದರ್ಶಿ ಶರತ್ ದೇವಾಡಿಗ ವರದಿ ವಾಚಿಸಿದರು
ಲೆಕ್ಕಪತ್ರ ಮಂಡನೆ ಸಹಿತ ಇತರೆ ವಿಚಾರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.