ಕಡಬ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಜಾಗ ಗುರುತಿಸಲು ತಹಶಿಲ್ದಾರರಿಗೆ ಸಂಸದ ಕ್ಯಾ. ಚೌಟ ಸೂಚನೆ

ಕಡಬ ತಾಲೂಕಿನ ಸವಣೂರು, ಸುಬ್ರಮಣ್ಯ, ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವುದಕ್ಕೆ ಜಾಗ ಗುರುತಿಸುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಪತ್ರ ಬಂದಿರುವ ಹಿನ್ನಲೆಯಲ್ಲಿ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಕಡಬ ತಾಲೂಕು ತಹಶಿಲ್ದಾರರಿಗೆ ಸೂಚನೆ ನೀಡಿದ್ದಾರೆ.

ಕಡಬ ತಾಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕರ ಭೇಟಿ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ರವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಪಿಎಂ ಕುಸುಮ ಯೋಜನೆಯಡಿ ದೇಶದೆಲ್ಲೆಡೆ ಸೋಲಾರ್ ಪಾರ್ಕ್ ಗಳನ್ನು ಸ್ಥಾಪಿಸಿ ಗ್ರೀನ್ ಎನರ್ಜಿಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಸವಣೂರು, ಸುಬ್ರಮಣ್ಯ ನೆಲ್ಯಾಡಿ ಅಥವಾ ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಜಾಗ ಗುರುತಿಸುವಂತೆ ಸಚಿವಾಲಯದಿಂದ ಮೆಸ್ಕಾಂಗೆ ಪತ್ರ ಬಂದಿದೆ. ಹೀಗಾಗಿ, ಒಂದು ವಾರದೊಳಗೆ ಕಡಬ ತಾಲೂಕು ವ್ಯಾಪ್ತಿಯಲ್ಲಿ ಪಿಎಂ ಕುಸುಮ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿ ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಸಂಸದರು ತಹಶಿಲ್ದಾರರಿಗೆ ಸೂಚಿಸಿದ್ದಾರೆ.
ಕೋಡಿಂಬಾಳ ರೈಲು ಅಭಿವೃದ್ಧಿಯ ಭರವಸೆ:
ಸಂಸದರು ತಾಲೂಕಿನ ಜನತೆಯ ಕುಂದು-ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದ ವೇಳೆ, ಕಡಬಕ ತಾಲೂಕಿನ ಕೋಡಿಂಬಾಳದ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಮನವಿ ನೀಡಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಂಸದರು, ಸಂಬಂಧಪಟ್ಟವರ ಜತೆಗೆ ಚರ್ಚಿಸಿ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.ಸಭೆಯಲ್ಲಿ ನೆಲ್ಯಾಡಿ ಪೇಟೆಯಲ್ಲಿ ಹೈವೆ ಡಿವಡೈರ್ ನ್ನು ತೆರವು ಮಾಡಿ ನೆಲ್ಯಾಡಿ ಪೇಟೆಯಲ್ಲಿ ಪ್ಲೈವರ್ ನಿರ್ಮಾಣ ಮಾಡಬೇಕೆಂದು ಸಂಸದರಲ್ಲಿ ಮನವಿ ಮಾಡಿದರು ಈ ಬಗ್ಗೆ ಪ್ರತಿಕ್ರಯಿಸಿದ ಸಂಸದರು ಇದರಲ್ಲಿ ತಾಂತ್ರಿಕ ಸಮಸ್ಯೆ ಇದೆ ಹಾಗು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.ಅನೇಕ ಮಂದಿ ವೈಯ್ಯಕ್ತಿಕವಾಗಿ ಸಾಮಾಜಿಕ ಕೆಲಸ ಕಾರ್ಯಗಳ ಬಗ್ಗೆ ಹಲವು ಮಂದಿ ಸಂಸದರಿಗೆ ಮನವಿ ಮಾಡಿದರು.ಸಂಸದರ ಅಹವಾಲು ಸ್ವಿಕರಿಸುವ ಸಂಧರ್ಭದಲ್ಲಿ
ಮಿನಿ ವಿಧಾನ ಸೌದದಲ್ಲಿ ಜನಜಂಗುಲಿ ನೆರೆದಿತ್ತು.ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಜನರನ್ನು ಅಲೆದಾಡಿಸದಂತೆ ಇದೇ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ರಾಜ್ಯಬಿ.ಜೆ.ಪಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ,ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಪ್ರದಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬಿ.ಜೆ.ಪಿ ಪ್ರಮುಖರಾದ ಪುಲಸ್ತ್ಯ ರೈ,ಪ್ರಕಾಶ್ ಎನ್.ಕೆ,ಮಧುಸೂದನ್ ಕೊಂಬಾರು,ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಸುರೇಶ್ ದೆಂತಾರು,ರಮೇಶ ಕಲ್ಪುರೆ,ಆಶೋಕ್ ನೆಕ್ಕರೆ,ವಾಡ್ಯಪ್ಪ ಗೌಡ,ಸದಾಶಿವ ಶೆಟ್ಟಿ ಮಾರಂಗ,ಲಕ್ಷೀಶ ಪೆಲತ್ತಾರು,ಸೇರಿದಂತೆ ಹಲವು ಮಂದಿ ಬಿ.ಜೆ.ಪಿ ಪ್ರಮುಖರು,ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.