HomeFresh Newsಅತಿ ಹೆಚ್ಚು ಕುರಿ ಮಾಂಸ ರಫ್ತು ಮಾಡುವ ದೇಶ

ಅತಿ ಹೆಚ್ಚು ಕುರಿ ಮಾಂಸ ರಫ್ತು ಮಾಡುವ ದೇಶ

ಆಸ್ಟ್ರೇಲಿಯಾ ಅತಿ ಹೆಚ್ಚು ಕುರಿ ಮಾಂಸ ರಫ್ತು ಮಾಡುವ ದೇಶವಾಗಿದೆ; ಅತಿ ಹೆಚ್ಚು ಕುರಿ ಮಾಂಸ ಆಮದು ಮಾಡಿಕೊಳ್ಳುವ ದೇಶ ಯುಎಸ್‍ಎ.

ನ್ಯೂಜಿಲ್ಯಾಂಡ್ ದೇಶವು ಅತಿ ಹೆಚ್ಚು ಕುರಿ ಮಾಂಸ ರಫ್ತು ಮಾಡುತ್ತಿತ್ತು; ಈಗ ಸರ್ರ ಕೆಳ ಜಾರಿದೆ. ಈಗಲೂ ಲ್ಯಾಂಬ್ ಕುರಿ ಮರಿ ಮಾಂಸ ರಫ್ತಿಗೆ ಅದು ಪ್ರಸಿದ್ಧವಿದೆ. ಜಾಗತಿಕವಾಗಿ ಪ್ರತಿ ವರುಷ 911 ಕೋಟಿ ಡಾಲರ್ ಮೌಲ್ಯದ ಕುರಿ ಮಾಂಸ ರಫ್ತು ಕಾಣುತ್ತದೆ. ಕುರಿ ಮಾಂಸ ರಫ್ತಿನ ಮುಂಚೂಣಿಯ ಹತ್ತು ದೇಶಗಳ ರಫ್ತು ಪ್ರಮಾಣ 90.7 ಶೇಕಡಾ ಆಗಿದೆ. ಮೌಲ್ಯದಂತೆ ಅವುಗಳ ರಫ್ತು ಇಂತಿದೆ.

ಆಸ್ಟ್ರೇಲಿಯಾ 360 ಕೋಟಿ ಡಾಲರ್, ನ್ಯೂಜಿಲ್ಯಾಂಡ್ 220 ಕೋಟಿ ಡಾಲರ್, ಬ್ರಿಟನ್ 74.49 ಕೋಟಿ ಡಾಲರ್, ಫ್ರಾನ್ಸ್ 41.78 ಕೋಟಿ ಡಾಲರ್, ಐರ್ಲೆಂಡ್ 41.07 ಕೋಟಿ ಡಾಲರ್, ನೆದರ್‍ಲ್ಯಾಂಡ್ಸ್ 33.68 ಕೋಟಿ ಡಾಲರ್, ಸ್ಪೆಯಿನ್ 32.73 ಕೋಟಿ ಡಾಲರ್, ಬೆಲ್ಜಿಯಂ 13.25 ಕೋಟಿ ಡಾಲರ್, ಕೆನ್ಯಾ 9.13 ಕೋಟಿ ಡಾಲರ್, ಮಂಗೋಲಿಯಾ 8.57 ಕೋಟಿ ಡಾಲರ್.

ಅಮೆರಿಕ ಸಂಯುಕ್ತ ಸಂಸ್ಥಾನವು 151 ಕೋಟಿ ಡಾಲರಿನ, ಚೀನಾ 119 ಕೋಟಿ ಡಾಲರಿನ, ಫ್ರಾನ್ಸ್ 95 ಲಕ್ಷ ಡಾಲರಿನ ಕುರಿ ಮಾಂಸ ಆಮದು ಮಾಡಿಕೊಳ್ಳುತ್ತವೆ. ಇನ್ನೊಂದು ಪ್ರಮುಖ ಆಮದು ದೇಶ ಯುನೈಟೆಡ್ ಅರಬ್ ಎಮಿರೇಟ್ಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments