ನಿಧಿಲ್ಯಾಂಡ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆ

ನಗರದ ಕಟ್ಟಡ ನಿರ್ಮಾಣ ಸಂಸ್ಥೆ ‘ನಿಧಿ ಲ್ಯಾಂಡ್’ನ ನೂತನ ಕಚೇರಿ ನಗರದ ಬಿಜೈ ಕಾಪಿಕಾಡ್‌ನಲ್ಲಿರುವ ನ್ಯೂ ಬೆರ್‍ರಿ ಎನ್‌ಕ್ಲೇವ್‌ನಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಸೋಮವಾರ ಉದ್ಘಾಟಿಸಿದರು.ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ನಿರ್ಮಾಣ ಕ್ಷೇತ್ರದ ಪರವಾನಗಿ ನೀಡುವ ಕೆಲಸಗಳನ್ನು ಸರಳಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಿಧಿ ಲ್ಯಾಂಡ್ ಬಿಲ್ಡರ್ ಸಂಸ್ಥೆಯು ಮಂಗಳೂರಿನ ಉದ್ಯಮ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿದೆ ಎಂದರು.
ಮಂಗಳೂರು ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಶ್ವೇಶ್ವರಿಜೀ ಆಶೀರ್ವಚನ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ, ಮಂಗಳೂರಿನ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಕೋವಿಡ್ ಸಂದರ್ಭದಲ್ಲೂ ಜಿಲ್ಲಾಡಳಿತದ ಜೊತೆ ಉದ್ಯಮಿಗಳು ನೀಡಿರುವ ಸಹಕಾರ, ಸಾಮಾಜಿಕ ಕಾಳಜಿ ಅಭಿನಂದನಾರ್ಹ ಎಂದರು.

ನಿಧಿ ಲ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್. ಕೆ. ಸನಿಲ್ ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ನಿಧಿ ಲ್ಯಾಂಡ್ 11 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಗ್ರಾಹಕರ ವಿಶ್ವಾಸ, ನಂಬಿಕೆ, ಸಂಸ್ಥೆಯ ಸಿಬ್ಬಂದಿಯ ಸಹಕಾರ ಸೇರಿದಂತೆ ಹಲವಾರು ಕೈಗಳ ಸೇರುವಿಕೆಯ ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ’ ಎಂದರು.
ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಲ್ಯಾನ್ಸ್ ಲಾಟ್ ಪಿಂಟೊ, ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ, ಪ್ರಕಾಶ್, ಕುಟುಂಬದ ಸದಸ್ಯರಾದ ಮಾಧವ ಸುವರ್ಣ, ಶರತ್ ಚಂದ್ರ ಸನಿಲ್, ನಯನಾ ಸನಿಲ್ ಇದ್ದರು.

ಸಂಸ್ಥೆಯ ಸಲಹೆಗಾರ ಧರ್ಮರಾಜ್ ಅವರನ್ನು ಗೌರವಿಸಲಾಯಿತು. ನಿಧಿ ಲ್ಯಾಂಡ್ ಯೋಜನೆಯ ಕಾರ್ಯ ಯೋಜನೆಯಲ್ಲಿ ಸಹಕರಿಸಿದ ಮಧುಕರ್, ಅಶೋಕ್ ರಾಜ್, ಸಿಪ್ರಿಯನ್, ಧೀರಜ್, ಕಿಶೋರ್, ಐವನ್ ಲೋಬೊ, ಸುಧೀರ್ ಪ್ರಭು, ಪ್ರದೀಪ್, ಮಹೇಶ್, ನವಾಝ್, ರಾಮ್ ಪಾಲ್, ದಿಲೀಪ್, ಸುಭಾಷ್, ರಾಮು, ದಿನೇಶ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ವಂದಿಸಿದರು.