ಪಡುಬಿದ್ರಿ ಬಾಲ ಗಣಪನ ಭವ್ಯ ಶೋಭಾಯಾತ್ರೆ: ಎಲ್ಲೆಲ್ಲೋ ಭಜನಾ ನೃತ್ಯಗಳದ್ದೇ ಕಲರವ

ಎಲ್ಲಾ ಕಡೆ ವಿಜಯದಶಮಿಯಂದು ತಾಯಿ ಶಾರದೆಯ ವಿಜ್ರಂಃಣೆಯ ಶೋಭಾಯಾತ್ರೆಗಳು ನಡೆಯುತ್ತಿದ್ದರೆ ಪಡುಬಿದ್ರಿಯಲ್ಲಿ ಮಾತ್ರ ಬಾಲಗಣಪನ ಶೋಭಾಯಾತ್ರೆ ವಿವಿಧ ಧಾರ್ಮಿಕ ಚಿಂತನೆಯ ತಂಡಗಳಿಂದ ಭಜನಾ ಕುಣಿತಗಳು ಭಕ್ತ ಸಮೂಹವನ್ನು ಮಂತ್ರ ಮುಗ್ದರನ್ನಾಗಿಸಿದೆ.

ಗುಡ್ಡಕ್ಕೆ ದನ ಕಾಯಲು ಹೋದ ಮಕ್ಕಳು ಸಮಯ ಕಳೆಯಲು ಆಟಕ್ಕಾಗಿ ಪ್ರತಿಷ್ಠೆ ಮಾಡಿದ ಗಣಪನೇ ಇಂದು ಗುಡ್ಡ ಗಣಪನಾಗಿಯೂಮಕ್ಕಳು ಪೂಜಿಸಿದ್ದರಿಂದ ಬಾಲ ಗಣಪನಾಗಿಯೂ ಲಕ್ಷಾಂತರ ಭಕ್ತಾಧಿಗಳ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ಪಡುಬಿದ್ರಿಯಲ್ಲಿ ನಿಲೆ ನಿಂತಿರುವ ಗಣಪತಿ, ಚೌತಿಯಂದ್ದು ಪ್ರತಿಷ್ಠೆಗೊಂಡು ತಾಯಿ ಶಾರದೆಯ ನವರಾತ್ರಿಯ ಉತ್ಸವಗಳಿಂದ ಕಣ್ಣ್ ತುಂಬಿಸಿಕೊಂಡು ವಿಜಯ ದಶಮಿಯ ತಾಯಿ ಶಾರದೆಯ ಶೋಭಾಯಾತ್ರೆಯಂದ್ದೇ ತಾನೂ ಶೋಭಾಯಾತ್ರೆ ಯೊಂದಿಗೆ ತೆರಳಿ ಕಡಲ ನೀರಿನಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಐಕ್ಯವಾಗಲಿದ್ದಾನೆ. ಬಾಲ ಗಣಪತಿಗೆ ರಂಗ ಪೂಜೆ ಬಹಳ ಇಷ್ಟವಾದ ಸೇವೆ. ಲಕ್ಷಾಂತರ ಸಂಖ್ಯೆಯಲ್ಲಿ ಚೌತಿಯಂದ್ದು ಮೊದಲುಗೊಂಡು ವಿಜಯದಶಿಯವರೆಗೂ ಸೇವೆಯನ್ನು ನೀಡಿ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಾರೆ. ಹಿಂದೂ ಸಂಘಟನೆಗಳು ಸಹಿತ ಮಹಿಳಾ ಸಂಘ ಸಂಸ್ಥೆಗಳು ಗಣಪನ ಶೋಭಾಯಾತ್ರೆಯಲ್ಲಿ ಭಜನಾ ಕುಣಿತಗಳ ತಂಡಗಳನ್ನು ಸಿದ್ದಗೊಳಿಸಿ ಬಾಲಗಣಪನ ಸೇವೆಯನ್ನು ಶ್ರದ್ಧೆಯಿಂದ ಮಾಡುವ ಮೂಲಕ ಸಹಸ್ರಾರು ಭಕ್ತಾಧಿಗಳು ಪಾಲ್ಗೊಂಡ ಶೋಭಾಯಾತ್ರೆ ಬಹಳ ಅರ್ಥಪೂರ್ಣವಾಗಿ ಸುಖಾಂತ್ಯಗೊಂಡಿದೆ.

Related Posts

Leave a Reply

Your email address will not be published.