Home Posts tagged #padubidre

ಕಾಪು ಕೊಪ್ಪಲಂಗಡಿ ಬಳಿ ಭೀಕರ ಅಪಘಾತ : ಇಬ್ಬರ ಸ್ಥಿತಿ ಗಂಭೀರ

ಇಂದು ನಸುಕಿನ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಕಾರು ತೀವೃ ಜಖಂ ಗೊಂಡಿದ್ದು ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾದರೆ ಮತ್ತಿಬ್ಬರಿಗೆ ತೀವೃ ಸ್ವರೂಪದ ಗಾಯಗಳಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ನಾಲ್ವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಕಾಪುವಿನ ಕೊಪ್ಪಲಂಗಡಿಯಲ್ಲಿ ನಿಯಂತ್ರಣ ತಪ್ಪಿ

ಕನ್ನಾಂಗಾರು : ಮನೆಗೆ ನುಗ್ಗಿ ನಗ ನಗದು ಕಳವು

ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು. ಸೋಮವಾರ ಸಂಜೆ ಸಮಯ ಆರ್ಡರ್ ಮಾಡಲಾದ “ಎಸಿ”ಯನ್ನು ಮನೆಗೆ ತಂದ ವ್ಯಕ್ತಿ ಮನೆಮಂದಿ

ಪಡುಬಿದ್ರಿ: ಮದ್ಯ ಸೇವಿಸಿ ಪೊಲೀಸರ ಅತಿಥಿಯಾದ ವಾಹನ ಚಾಲಕ

ರಾತ್ರಿ ಹೊತ್ತು ಗ್ಯಾಸ್ ಸಾಗಾಟ ವಾಹನವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿಯಲ್ಲೇ ನಿಲ್ಲಿಸಿ ಮದ್ಯ ಸೇವಿಸಲು ಹೋದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ. ಮೂಡಬಿದರೆಯದ್ದು ಎನ್ನಲಾದ ಎಚ್‌ಪಿ ಅನಿಲ ಸಾಗಾಟ ವಾಹನವನ್ನು ಅದರ ಚಾಲಕ ಕಟಪಾಡಿ ಪೇಟೆಬಳಿ ಹೆದ್ದಾರಿಯಲ್ಲೇ ನಿಲ್ಲಿಸಿ ತೆರಳಿದ್ದು, ಸ್ಥಳಕ್ಕೆ ಬಂದ ಕಟಪಾಡಿಯ ಉಪ ಠಾಣಾ ಪೊಲೀಸ್ ಒರ್ವರು ಸುಮಾರು ಅರ್ಧ ಗಂಟೆ ಕಾದು ಆ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಂಠಪೂರ್ತಿ ಕುಡಿದು ಬಂದ ಚಾಲಕ ತಾನು

❌ಪಡುಬಿದ್ರಿ: ವಯೋವೃದ್ದೆಗೆ ಸ್ಕೂಟರ್ ಡಿಕ್ಕಿ ತಲೆಗೆ ಗಾಯ

ಪಾದಚಾರಿ ಮಹಿಳೆಯೋರ್ವರಿಗೆ ಸ್ಕೂಟರೊಂದು ಡಿಕ್ಕಿಯಾಗಿ ತಲೆಗೆ ಗಾಯವಾದ ಘಟನೆ ಕಾರ್ಕಳ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಗಾಯಗೊಂಡ ವೃದ್ದೆ ಸ್ಥಳೀಯ ನಿವಾಸಿ ಗುಲಾಬಿ (70) ಎಂದು ಗುರುತಿಸಲಾಗಿದೆ. ಮಳೆ ಸುರಿಯುತ್ತಿದ್ದ ವೇಳೆ ಪಕ್ಕದ ಅಂಗಡಿಗೆ ಹೋಗಿದ್ದು, ಪಡುಬಿದ್ರಿ ಕಡೆಯಿಂದ ಪಲಿಮಾರಿನ ಮನೆಗೆ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಹಿಳೆಯ ತಲೆಗೆ ಗಾಯವಾಗಿದೆ. ಸ್ಕೂಟರ್ ಸವಾರ ಪಕ್ಕಕ್ಕೆ ಬಿದ್ದಿದ್ದು, ಒಂದು ಕಣ್ಣಿಗೆ

ಹೆಜಮಾಡಿ ಟೋಲ್ ಬಳಿ ಕುಡುಕ ಲಾರಿ ಚಾಲಕನ ಅವಾಂತರ

ವಿಪರೀತ ಮದ್ಯಪಾನ ಮಾಡಿ ಕಂಟೇನರ್ ಚಲಾಯಿಸಿಕೊಂಡು ಬಂದು ಹೆಜಮಾಡಿ ಟೋಲ್ ಬಳಿಯ ಬೃಹತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದ ಘಟನೆ ನಡೆದಿದೆ.ಯು.ಪಿ. ಮೂಲದ ವ್ಯಕ್ತಿ ಮಹಾರಾಷ್ಟ್ರ ನೋಂದಾಯಿತ ಕಂಟೇನರ್ ಚಲಾಯಿಸಿಕೊಂಡು ಬಂದಿದ್ದು, ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬಳಿಕ ಸ್ಥಗಿತಗೊಂಡ ಕಂಟೇನರ್ ನಲ್ಲಿದ್ದ ಚಾಲಕನನ್ನು ಸ್ಥಳೀಯರು ವಿಚಾರಿಸಲು ಮುಂದಾದಾಗ ಮದ್ಯ ಸೇವಿಸಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸ್ರು ಚಾಲಕನನ್ನು ವಾಹನದಿಂದ

ಪಡುಬಿದ್ರೆ : ಟಿಪ್ಪರ್ ನೊಳಗೆ ಹೋಗಿ ಆವಾಂತರ ಸೃಷ್ಟಿಸಿದ ಹಾವು

ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ನೊಳಗೆ ಹೋಗಿ ಅವಾಂತರ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ನಡೆದಿದೆ. ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದನ್ನು ವಾಹನದ ಅಡಿಗೆ ಬೀಳದಂತೆ ರಕ್ಷಿಸುವ ನಿಟ್ಟಿನಲ್ಲಿ ದಾಮೋದರ್ ಪಾಂಗಳ ಮತ್ತು ಸ್ಥಳೀಯರು ಅವರು ಹಾವನ್ನು ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ತೆರಳಲು ದಾರಿ ಮಾಡಿಕೊಟ್ಟಿದ್ದರು. ಈ ವೇಳೆ

ಶ್ರೀ ಮಹಾಲಕ್ಷ್ಮಿ ದೇವಸ್ಥಾನ : ಉಚ್ಚಿಲ ದಸರಾ-2023 ಅದ್ಧೂರಿಯಾಗಿ ನಡೆಸಲು ತೀರ್ಮಾನ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ 2023 ಪೂರ್ವಭಾವಿ ಸಭೆಯು ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಿತು. ಅಕ್ಟೋಬರ್ 15ರಿಂದ ಅ. 24ರ ವರೆಗೆ ವೈಭವದ ಉಚ್ಚಿಲ ದಸರಾ ನಡೆಯಲಿದೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ನೇತೃತ್ವದಲ್ಲಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಹಾಗೂ ಸಹೃದಯಿ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಕಳೆದ ಬಾರಿ ಪ್ರಪ್ರಥಮ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ

ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲ : ಮಾಜಿ ಸಚಿವ ವಿನಯಕುಮಾರ್ ಸೊರಕೆ

ಉಡುಪಿಯಲ್ಲಿ ಶೌಚಾಲಯ ವಿಡಿಯೋ ನಡೆದಿದೆ ಎಂಬ ಪ್ರಕರಣಕ್ಕೆ ಉತ್ತರ ನೀಡ ಬೇಕಾದವರು ಕಾಲೇಜು ಆಡಳಿತ. ಆದರೆ ಆ ಘಟನೆಯನ್ನು ಹಿಜಾಬಿಗೆ ಹೋಲಿಕೆ ಮಾಡಿಕೊಂಡು ಉಡುಪಿ ಶಾಸಕರೇ ಸೇರಿ ಡೊಂಬರಾಟ ನಡೆಸುತ್ತಿದ್ದಾರೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವ್ಯಂಗವಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಆಡಳಿತದಲ್ಲಿರುವ ಸಂದರ್ಭದಲ್ಲೇ ಅವರೇ ಕರೆತಂದ ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲದಂತಾಗಿದೆ. ಮಹಿಳಾ

ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ

ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್ ಅವರು, “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ

ಪುರಸಭೆಯ ನಿರ್ಲಕ್ಷ್ಯ ಕೃಷಿ ಚಟುವಟಿಕೆಗಳಿಗೆ ಅಡ್ಡಿ: ಮಾಹಿತಿ ನೀಡಿದರೂ ಮೌನವಾದ ಅಧಿಕಾರಿಗಳು

ಕೃಷಿ ಚಟುವಟಿಕೆ ನಡೆಸಲು ಉತ್ತೇಜನ ನೀಡಬೇಕಾಗಿದ್ದ ಕಾಪು ಪುರಸಭೆಯಿಂದಲೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರ, ಅವರು ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ಕಾಪುವಿನ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಪು-ಮಲ್ಲಾರು ಮುಖ್ಯ ರಸ್ತೆ ಇಕ್ಕೆಲುಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಗಿಡಗಂಟಿಗಳನ್ನು, ಮಣ್ಣ ದಿಬ್ಬಗಳನ್ನು ತೆಗೆದ್ದರೂ ಅಲ್ಲಿಂದ ತೆರವು ಮಾಡದೆ ರಸ್ತೆ ಅಂಚಿನಲ್ಲೇ ಬಿಟ್ಟು ಹೋದ ಪರಿಣಾಮ,