ಪಡುಮಾರ್ನಾಡು ಪಂಚಾಯತ್ ಗೆ ಶಿವರಾಮ ಕಾರಂತ ಪ್ರಶಸ್ತಿ
ಮೂಡುಬಿದಿರೆ: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಇವರು ಕೊಡಮಾಡುವ 2023-24 ನೇ ಸಾಲಿನ ” ಶಿವರಾಮ ಕಾರಂತ ಪ್ರಶಸ್ತಿ-2024 ” ಪ್ರಶಸ್ತಿಗೆ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ಆಯ್ಕೆಯಾಗಿರುತ್ತದೆ.
ಪ್ರಶಸ್ತಿಯನ್ನು ನ.10 ರಂದು ಕೋಟದ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ನಿರ್ದೇಶಕರು(ಪ್ರಭಾರ) ಸಾಯೀಶ ಚೌಟ ಮತ್ತು ಸದಸ್ಯರು ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಿಂದ ಸ್ವೀಕರಿಸಲಿದ್ದಾರೆ.